ಮತ್ತೆ 3 ಮರಗಳಿಗೆ ಕೊಡಲಿ ಎಟ್ಟು

ಮತ್ತೆ 3 ಮರಗಳಿಗೆ ಕೊಡಲಿ ಎಟ್ಟು

ಮಹದೇವಪುರ, ಮಾ. 24: ಯಾವುದೇ “ದಯಾ ದಾಕ್ಷಿಣ್ಯವಿಲ್ಲದೆ” ನಗರದಲ್ಲಿ ಮರಗಳಿಗೆ ಕೊಡಲಿ ಎಟ್ಟು ಬಿಳುವುದು ಸಾಮಾನ್ಯವಾಗಿ ಕಂಡಬರುತ್ತಿದೆ. ಒಂದೇಡೆ ಅರಣ್ಯ ಇಲಾಖೆ, ಬಿಬಿಎಂಬಿ, ಸಂಘಸಂಸ್ಥೆಗಳು, ಪರಿಸರ ಪ್ರೇಮಿಗಳು ಮರಗಳ ರಕ್ಷಣೆ ಮಾಡಿ ಎಂದು ದಿನನಿತ್ಯ ಹೋರಾಟ, ಅರಿವು ಮೂಡಿಸುತ್ತಬಂದರು ಕ್ಯಾರೆ ಎನ್ನದೆ ಮಾರತ್ತಹಳ್ಳಿ ವಾರ್ಡ್ 86ರ ಇಲ್ಲಿಗೆ ಸೇರಿದ ಯಮಲೂರು ಗ್ರಾಮದ ಸರ್ಕಾರಿ ಶಾಲೆ ಹಾಗೂ ಸೋಮೇಶ್ವರ ದೇವಸ್ಥಾನದ ರಸ್ತೆಯ ಬದಿಯಲ್ಲಿರುವ ಮೂರು ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ಬಿದ್ದು ಮರ ನೆಲಕ್ಕೊರಿಲ್ಲಿದೆ‌.

ಶುದ್ಧ ಗಾಳಿ, ನೆರಳು ಹಾಗೂ ವಿವಿಧ ಪಕ್ಷಿ ಪ್ರಾಣಿಗಳಿಗೆ ಆಶ್ರಯವಾಗಿರುವಂತ ಮರಗಳನ್ನು ಕಡಿದಿರುವುದು ಕಂಡುಬಂದಿದೆ.  ಮರಗಳ ರಕ್ಷಣೆ ಮಾಡಬೇಕಾದ ನಾಗರಿಕರು ಹಿಗೆ ಮಾಡಬಾರದ್ದಿತ್ತು. ಇಲ್ಲಿದ ಅತಿಮರ, ಮಹಾಘನಿಮರ ಹಾಗೂ ಗಸಗಸೆ ಮರಗಳನ್ನು ರಾಜರೋಷವಾಗಿ ಕಡಿದು ನೆಲಕ್ಕೆ ಬೀಳಿಸಿರುವುದು ಕಂಡ ಸ್ಥಳೀಯರು, ಆಟೋಚಾಲಕರು ಸಹ ಬಹಳ ಬೇಸರಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ಹತ್ತು ಗಿಡಗಳನ್ನು ಅದೇ ಸ್ಥಳದಲ್ಲಿ ನೆಟ್ಟು ಬೆಳೆಸಬೇಕು ಮತ್ತು ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಿಡಿತ ಫೌಂಡೇಶನ್ ಸಂಸ್ಥೆಯ ಸದಸ್ಯರು ಮನವಿ ಮಾಡಿದರೆ.

 

ಫ್ರೆಶ್ ನ್ಯೂಸ್

Latest Posts

Featured Videos