ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾದಿಗ ಮುಖಂಡರ ಸಭೆಯನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಹಾಗೂ ಅಬಕಾರಿ ಸಚಿವರಾದ ತಿಮ್ಮಾಪುರ ತವರ ನೇತೃತ್ವದಲ್ಲಿ ನಡೆಸಲಾಯಿತು.
ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ರವರ ನೇತೃತ್ವದ ಏಕಸದಸ್ಯ ಆಯೋಗದ ನಿರ್ದೇಶನದಂತೆ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು ಅದರಂತೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಮೀಕ್ಷೆ ಹೆಚ್ಚಾಗಿ ನಡೆಸಲು ಆಯಾ ಭಾಗದ ಮುಖಂಡರಿಗೆ ನಿರ್ದೇಶನ ನೀಡಿದರು.
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೂ ಶೇಕಡ 45 ರಷ್ಟು ಸಮೀಕ್ಷೆ ನಡೆದಿದ್ದು ರಾಜ್ಯದಾದ್ಯಂತ ಶೇಕಡಾ 84 % ರಷ್ಟು ಪ್ರಮಾಣದಲ್ಲಿ ಸಮೀಕ್ಷೆಯಾಗಿದ್ದು ಸಮದಾಯದವರು ಎಲ್ಲಾರು ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ಆನ್ ಲೈನ್ ನಲ್ಲಿಯೂ ನೊಂದಣಿ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಮೇ 5 ರಿಂದ ಮನೆ ಮನೆಗೆ ಬೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದು ಇದೇ ತಿಂಗಳ 29 ರವರೆಗೂ ನಡೆಯಲಿದ್ದು ಆನ್ ಲೈನ್ ಮೂಲಕ ಜೂನ್ 1ರವರೆಗೂ ನೋಂದಣಿ ಮಾಡಲು ಅವಕಾಶ ಕಲ್ಪಿಸಿದ್ದು ಅದರಂತೆ ಪರಿಶಿಷ್ಟ ಜಾತಿಯ 101 ಜಾತಿಗಳ ಸಮುದಾಯದವರು ತಮ್ಮ ಮೂಲ ಜಾತಿಗಳನ್ನು ನೊಂದಾಯಿಸಲು ಮುಖಂಡರಿಗೆ ಮನವಿ ಮಾಡಿದರು.