ದಾಖಲೆ ಮುರಿಯುವ ಹಿಟ್ ಮ್ಯಾನ್

ದಾಖಲೆ ಮುರಿಯುವ ಹಿಟ್ ಮ್ಯಾನ್

ಡಿ. 10 : ಮಹತ್ವದ ದಾಖಲೆಯನ್ನು ಸರಿಗಟ್ಟಲು ಭಾರತ ಕ್ರಿಕೆಟ್ ತಂಡದ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರಿಗೆ ಸಾಧ್ಯವಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಎದುರಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅಜೇಯ 335 ರನ್ ಗಳಿಸಿದ್ದರು. ನಿರಾಯಾಸವಾಗಿ ಆಡುತ್ತಿದ್ದ ವಾರ್ನರ್ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಪಂಡಿತರು, ಇನಿಂಗ್ಸ್ವೊಂದರಲ್ಲಿ 400 ರನ್ ಗಳಿಸಿದ್ದ ಬ್ರಯನ್ ಲಾರಾ ಅವರ ದಾಖಲೆ ಇಂದು ಮುರಿದು ಬೀಳಲಿದೆ ಎಂದು ಅಂದಾಜಿಸಿದ್ದರು. ಆದರೆ, ಅದು ಸುಳ್ಳಾಯಿತು. ಪಂದ್ಯಕ್ಕೆ ಮಳೆಯ ಭೀತಿ ಇದ್ದುದರಿಂದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ಹೀಗಾಗಿ ವಾರ್ನರ್ಗೆ ಅತಿ ಅಪರೂಪದ ದಾಖಲೆ ಬರೆಯುವ ಅವಕಾಶ ತಪ್ಪಿಹೋಗಿತ್ತು
ಪೇನ್ ನಿರ್ಧಾರವನ್ನು ಹಲವರು ಟೀಕಿಸಿದ್ದರು. ಇನ್ನೂ ಕೆಲವರು ತಂಡದ ಹಿತ ಮುಖ್ಯ ಎಂದು ಸಮರ್ಥಿಸಿಕೊಂಡಿದ್ದರು. ವಾರ್ನರ್ ತಮ್ಮ ದಾಖಲೆ ಮುರಿಯಲಿದ್ದಾರೆ ಎಂದು ನಿರೀಕ್ಷಿಸಿ ಅವರನ್ನು ಹಾರೈಸಲು ಸ್ವತಃ ಸಿದ್ಧರಾಗಿದ್ದ ಲಾರಾ ಬೇಸರವನ್ನೂ ವ್ಯಕ್ತಪಡಿಸಿದ್ದರು.
ಆದರೆ, ಈ ಬಗ್ಗೆ ಸಂಯಮದಿಂದ ಪ್ರತಿಕ್ರಿಯಿಸಿದ್ದ ವಾರ್ನರ್ ಮಾತ್ರ, ‘ಲಾರಾ ಅವರ ದಾಖಲೆಯನ್ನು ಮರಿಯಲು ನನಗೆ ಇನ್ನೊಂದು ಅವಕಾಶ ಸಿಗಬಹುದು’ ಎಂದು ಆಶಾಭಾವನೆ ವ್ಯಕ್ತಪಡಿಸಿ ಅಭಿಮಾನಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos