ಎನ್‌ಯು ಆಸ್ಪತ್ರೆಯ ತಜ್ಞರಿಂದ ಅಪರೂಪದ ಶಸ್ತ್ರ ಚಿಕಿತ್ಸೆ

  • In State
  • December 30, 2020
  • 337 Views
ಎನ್‌ಯು ಆಸ್ಪತ್ರೆಯ ತಜ್ಞರಿಂದ ಅಪರೂಪದ ಶಸ್ತ್ರ ಚಿಕಿತ್ಸೆ

ಟಿ.ದಾಸರಹಳ್ಳಿ: 7 ತಿಂಗಳು 15 ದಿನಗಳ ಹೆಣ್ಣು ಮಗುವಿನ ಎರಡು ಮೂತ್ರಪಿಂಡಗಳಲ್ಲಿ ಸೃಷ್ಟಿಯಾಗಿದ್ದ ಕಲ್ಲುಗಳನ್ನು ಎನ್.ಯು ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಪಿಇಆರ್‌ಸಿ ಮತ್ತು ಲೇಸರ್ ಚಿಕಿತ್ಸೆಯ ಮೂಲಕ ಕಲ್ಲುಗಳನ್ನು ತೆಗೆದಿದ್ದಾರೆ.
3 ವಾರಗಳ ಹಿಂದೆ ಜ್ವರದಿಂದ ಬಳಲುತ್ತಿದ್ದು, ಮಗು ವಿಪರೀತವಾಗಿ ಅಳುತ್ತಿತ್ತು. ತೀವ್ರ ತಪಾಸಣೆ ಒಳಪಡಿಸಿದಾಗ ಎರಡು ಕಿಡ್ನಿಗಳಲ್ಲಿ ಕಲ್ಲುಗಳು ಇರುವುದು ಪತ್ತೆಯಾಗಿ ಎಡಭಾಗದ ಕಿಡ್ನಿಯಿಂದ ಮೂತ್ರಕೋಶಕ್ಕೆ ಸಂಪರ್ಕ ಕಲ್ಪಿಸುವ ಟ್ಯೂಬ್ ನಲ್ಲಿ ಒಂಬತ್ತು ಮಿಲಿಮೀಟರ್ ಒಂದು ಸೆಂಟಿಮೀಟರ್ ಕಲ್ಲು ಇರುವುದು ಕಂಡುಬಂತು. ಯುರೆಕ್ಟೊಸ್ಕೋಪಿ ತಂತ್ರಜ್ಞಾನದ ಮೂಲಕ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಇದೀಗ ಮಗು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ವೈದ್ಯರ ತಂಡ ವಿವರಿಸಿದರು.
ಸಾಮಾನ್ಯವಾಗಿ ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳು ಕಂಡುಬರುವುದಿಲ್ಲ. ಏಕೆಂದರೆ ಈ ವಯಸ್ಸಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಘನ ಪದಾರ್ಥ ಸೇವಿಸುವುದಿಲ್ಲ. ಹೀಗಾಗಿ ಮಕ್ಕಳ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುವುದಿಲ್ಲ. ಆದರೆ ಈ ಮಗುವಿಗೆ ಎರಡು ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆ ಕಂಡು ಬಂದಿರುವುದು ಸಹ ಮತ್ತೊಂದು ವಿಸ್ಮಯವಾಗಿದೆ. ಈ ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜೊತೆಗೆ ಹೊಲ್ಮಿಯಮ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಮಕ್ಕಳ ಯುರಾಲಜಿ ಮತ್ತು ನೆಫ್ರಾಲಜಿ ವಿಭಾಗಗಳನ್ನು ಹೊಂದಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ನಮ್ಮದು ಒಂದಾಗಿದ್ದು ಅತ್ಯಾಧುನಿಕ ಮತ್ತು ಸುಸಜ್ಜಿತ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ ಪ್ರಸನ್ನ ವೆಂಕಟೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಪ್ರಮೋದ್ ಕೃಷ್ಣಪ್ಪ, ಡಾ. ಪರಿಮಳ, ಡಾ. ನಿತಿನ್ ನಾಯಕ್ ಮುಂತಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos