ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ

ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ

ಜೈಪುರ, ಸೆ.14:  ರಾಜಸ್ಥಾನದ  ಬಿಲ್ವಾರಾದಲ್ಲಿ ಬಾಲಕಿ ತನ್ನ ಸಹೋದರ ಸಂಬಂಧಿ ಹಾಗೂ ಸಹೋದರಿ ಜೊತೆ ಜಾತ್ರೆಯಿಂದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ 3 ಯುವಕರು ಅವರನ್ನು ಅಡ್ಡ ಹಾಕಿದ್ದಾರೆ. ಯುವಕರನ್ನು ನೋಡುತ್ತಿದ್ದಂತೆ ಬಾಲಕಿಯ ಜೊತೆಯಲ್ಲಿ ಇದ್ದವರು ಓಡಿ ಹೋಗಿದ್ದಾರೆ. ಆದರೆ ಯುವಕರು ಬಾಲಕಿಯನ್ನು ಅಪಹರಿಸಿ ಮರುಭೂಮಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ.

ಬಾಲಕಿಯನ್ನು ಅಪಹರಿಸುತ್ತಿದ್ದು ನೋಡಿ ಆಕೆಯ ಸಹೋದರ ಹತ್ತಿರದಲ್ಲಿದ್ದ ಮಾರುಕಟ್ಟೆಗೆ  ಓಡಿ ಹೋಗಿದ್ದಾನೆ. ಬಳಿಕ ಅಲ್ಲಿದ ಅಂಗಡಿಯ ಮಾಲೀಕನಿಗೆ ನಡೆದ ಘಟನೆಯನ್ನು ವಿವರಿಸಿ ಸಹಾಯ ಮಾಡುವಂತೆ ಬೇಡಿಕೊಂಡಿದ್ದಾನೆ. ಯುವಕನ ಮಾತು ಕೇಳಿದ ಅಂಗಡಿ ಮಾಲೀಕ ಸ್ಥಳಕ್ಕೆ ತಲುಪಿದ್ದಾಗ 3 ಯುವಕರು ಬಾಲಕಿಯ ಮೇಲೆ ಹಲ್ಲೆ ಮಾಡುತ್ತಿದ್ದರು, ಬಳಿಕ ಆರೋಪಿಗಳು ಅಂಗಡಿ ಮಾಲೀಕನನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ನಂತರ ಈ ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ಅಂಗಡಿಯ ಮಾಲಿಕನ್ನು ನೋಡಿ ಹೆದರಿ ನಗ್ನಳಾಗಿ ಓಡಲು ಶುರು ಮಾಡಿದ್ದಾಳೆ, ಮಾಲಿಕ ಆಕೆಯ ಹಿಂದೆ ಅರ್ಧ ಕಿ.ಮೀವರೆಗೂ ಓಡಿ ಹೋಗಿದ್ದಾರೆ ಬಳಿಕ ನಾನು ನೀಡಿದ್ದ ಉಡುಪನ್ನು ತೆಗೆದುಕೊಂಡಳು ಎಂದು ಅಂಗಡಿಯ ಮಾಲಿಕ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಅಂಗಡಿ ಮಾಲೀಕ ಹಾಗೂ ಬಾಲಕಿಯ ಸಹೋದರ ಹಾಗೂ ಸಹೋದರಿಯ ಹೇಳಿಕೆಯನ್ನು ಪಡೆದು, ಆರೋಪಿಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧ ಮತ್ತು ಪರಿಶಿಷ್ಟ ಜಾತಿ ವಿರುದ್ಧದ ದೌರ್ಜನ್ಯದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಪೊಲೀಸರು 3 ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos