ರೇಪ್ ಹಂತಕರ ಎನ್ ಕೌಂಟರ್: ಪೊಲೀಸರ ವಿರುದ್ಧ’ FIR ದಾಖಲಿಸಲು ಹೈಕೋರ್ಟ್ ಗೆ ಅರ್ಜಿ

ರೇಪ್ ಹಂತಕರ ಎನ್ ಕೌಂಟರ್: ಪೊಲೀಸರ ವಿರುದ್ಧ’ FIR ದಾಖಲಿಸಲು ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು, ಡಿ. 07: ಹೈದ್ರಾಬಾದ್ ನಲ್ಲಿ ಪಶು ವೈದ್ಯೆಯ ಮೇಲೆ ಗ್ಯಾಂಗ್ ರೇಪ್, ಹಂತರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ವಕೀಲರಿಬ್ಬರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸ್ಲಲಿಸಿದ್ದಾರೆ.

ವಕೀಲರಾದಂತ ಜಿ ಎಸ್ ಮಣಿ ಮತ್ತು ಪ್ರದೀಪ್ ಕುಮಾರ್ ಯಾದವ್ ಎಂಬುವರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈದ್ರಾಬಾದ್ ಪಶು ವೈದ್ಯೆಯ ಮೇಲಿನ ಹಂತಕರನ್ನು ಪೊಲೀಸರು ಎನ್ ಕೌಂಟರ್ ಮೂಲಕ ಹೊಡೆದು ಹಾಕಿದ್ದರು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನು, ನ್ಯಾಯಾಲಯ ಇದೆ. ಇಲ್ಲಿ ಆರೋಪಿಗಳಿಗೆ ತಕ್ಷ ಶಿಕ್ಷೆಯಾಗುತ್ತಿತ್ತು. ಹೀಗಿರುವಾಗ ಅವರನ್ನು ಎನ್ ಕೌಂಟರ್ ನೆಪದಲ್ಲಿ ಬಲಿ ಪಡೆಯಲಾಗಿದೆ. ಹೀಗಾಗಿ ಎನ್ ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್ ಐ ಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos