ಅವರೊಬ್ಬರು ಗಾಯಕಿ, ಮಾಡೆಲ್ ಅಲ್ಲ: ರಾನು ಮೊಂಡಾಲ್ ಪುತ್ರಿ..!

ಅವರೊಬ್ಬರು ಗಾಯಕಿ, ಮಾಡೆಲ್ ಅಲ್ಲ: ರಾನು ಮೊಂಡಾಲ್ ಪುತ್ರಿ..!

ಮುಂಬೈ, ನ. 30: ಇತ್ತೀಚಿಗೆ ಹಾಡಿನ ಮೂಲಕ ರಾತ್ರೋರಾತ್ರಿ ಫೇಮಸ್ ಆದ ವೈರಲ್ ಸ್ಟಾರ್ ರಾನು ಮೊಂಡಾಲ್, ಇತ್ತೀಚೆಗೆ ತಮ್ಮ ಮೇಕಪ್ ಫೋಟೋದಿಂದ ಸಾಕಷ್ಟು ಟ್ರೋಲ್ ಆಗಿದ್ದರು. ರಾನು ಮೈಬಣ್ಣಕ್ಕಿಂತ ತೀರಾ ಬೆಳ್ಳಗೆ ಕಾಣುವಂಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಫೋಟೋ ಇಟ್ಕೊಂಡು ಸಿಕ್ಕಾಪಟ್ಟೆ ಟ್ರೋಲ್ ಹಾಗೂ ಮೀಮ್ಸ್ ಮಾಡಲಾಗಿತ್ತು. ನಂತರ ಟ್ರೋಲ್ ಆದ ಫೋಟೋ ಫೇಕ್ ಅಂತ ಸ್ವತಃ ಮೇಕಪ್ ಮಾಡಿದ್ದ ಬ್ಯೂಟಿ ಪಾರ್ಲರ್ನವರು ಸ್ಪಷ್ಟಪಡಿಸಿದ್ದರು. ಇದೀಗ ಈ ಬಗ್ಗೆ ರಾನು ಮೊಂಡಾಲ್ ಪುತ್ರಿ ಎಲಿಜಬೆತ್ ಸತಿ ರಾಯ್ ಟ್ರೋಲಿಗರ ವಿರುದ್ಧ ಕಿಡಿ ಕಾರಿದ್ದಾರೆ.

ನನ್ನ ಅಮ್ಮ ಆಟಿಟ್ಯೂಡ್ ತೋರಿಸುವ ಪ್ರಾಬ್ಲಂ ಹೊಂದಿದ್ದಾರೆ ಅನ್ನೋದು ನಿಜ. ಇದ್ರಿಂದ ಕೆಲವು ತೊಂದರೆಗಳು ಉಂಟಾಗುತ್ತವೆ. ಆದರೆ, ತನ್ನ ಜೀವನದಲ್ಲಿ ತುಂಬಾ ಕಷ್ಟಪಟ್ಟು, ಅಂತಿಮವಾಗಿ ಯಶಸ್ಸಿನ ರುಚಿ ಸವಿಯಲು ಆರಂಭಿಸಿದ ಅಮ್ಮನ ಬಗ್ಗೆ ತುಂಬಾ ಟ್ರೋಲ್ ಆಗುತ್ತಿರುವುದು ಬೇಸರ ತಂದಿದೆ.

ಅವರಿಂದ ಅಂಪ್ ಮಾಡಿಸುವ ಅಗತ್ಯ ಇತ್ತೆ..? ಅವರಿದನ್ನು ಏಕೆ ಮಾಡುತ್ತಿದ್ದಾರೆ..? ಅವರೊಬ್ಬರು ಗಾಯಕಿ, ಮಾಡೆಲ್ ಅಲ್ಲ. ಜನರು ಅವರನ್ನು ಮಿಮಿಕ್ ಮಾಡ್ತಿದ್ದಾರೆ. ಇದು ತುಂಬಾ ಕೆಟ್ಟ ವರ್ತನೆ. ಆಕೆಗೆ ಹೀಗಾಗುತ್ತೆ ಅಂತ ನಾನು ಯೋಚಿಸಿರಲಿಲ್ಲ. ಆಕೆ ಹೈಫೈ ಕುಟುಂಬಕ್ಕೆ ಸೇರಿದವರಲ್ಲ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು ಹಾಗೂ ಬಾಲಿವುಡ್ನ ಗ್ಲಾಮರಸ್ ಜಗತ್ತಿನಲ್ಲಿ ಕಾಲಿಡಲು ಅವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ರಸ್ತೆ-ಬೀದಿಗಳಲ್ಲಿ ಹಾಡುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಫೇಮಸ್ ಆದರು. ಈಗ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ. ನನ್ನ ಪ್ರಕಾರ ಎಲ್ಲಾ ಟ್ರೋಲ್ಗಳ ಹಿಂದೆ ಒಂದು ಕಾರಣವಿದೆ ಅನ್ನಿಸ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos