ರಣಜಿ ಟ್ರೋಫಿ ಆರಂಭ : ಹಾವು ಪ್ರತ್ಯಕ್ಷ;

ರಣಜಿ ಟ್ರೋಫಿ ಆರಂಭ : ಹಾವು ಪ್ರತ್ಯಕ್ಷ;

ವಿಜಯವಾಡ , ಡಿ. 11 : ಕ್ರಿಕೆಟ್ ಮೈದಾನದಲ್ಲಿ ಅಪರೂಪ ಎಂಬಂತೆ ಆಂಧ್ರ ಪ್ರದೇಶ ಹಾಗೂ ವಿದರ್ಭ ತಂಡಗಳ ನಡುವೆ 2019-20ನೇ ಆವೃತ್ತಿಯ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಅಂಗಳಕ್ಕೆ ಪ್ರವೇಶ ಮಾಡಿದ ಘಟನೆ ನಡೆದಿದೆ.ಹೀಗಾಗಿ ಪಂದ್ಯ ಕೆಲ ಸಮಯ ಬಿಟ್ಟು ತಡವಾಗಿ ಆರಂಭವಾಯಿತು.

ಬಿಸಿಸಿಐ ದೇಶಿ ಟೂರ್ನಿಗಳ ಟ್ವಿಟರ್ ಖಾತೆ ‘ಬಿಸಿಸಿಐ ಡೊಮಾಸ್ಟಿಕ್’ ಮೈದಾನದಲ್ಲಿ ಹಾವಿರುವ ವಿಡಿಯೋವನ್ನು ಪ್ರಕಟ ಮಾಡಿದೆ. ಕೊಹ್ಲಿ ಅಲ್ಲ; ನನಗೆ 3ನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಧೈರ್ಯ ತುಂಬಿದ್ದು ಈ ಆಟಗಾರ ಎಂದ ದುಬೆ ಉಭಯ ತಂಡಗಳ ನಡುವಿನ ಪ್ರಸಕ್ತ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ವಿದರ್ಭ ತಂಡದ ನಾಯಕ ಫೈಝ್ ಫಝಲ್ ಫೀಲ್ಡಿಂಗ್ ಆಯ್ದುಕೊಂಡರು. ಈ ಸಂದರ್ಭದಲ್ಲಿ ಮೈದಾನಕ್ಕೆ ಇಳಿದ ಆಟಗಾರರು ಇನ್ನೇನು ಆಟ ಶುರು ಮಾಡಬೇಕು ಎನ್ನುವಷ್ಟರಲ್ಲಿ ಹಾವು ಕಾಣಿಸಿಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos