ರಕ್ಷಿತ್ ವರ್ಸಸ್ ರಶ್ಮಿಕಾ

ರಕ್ಷಿತ್ ವರ್ಸಸ್ ರಶ್ಮಿಕಾ

ಬೆಂಗಳೂರು, ಅ. 22: ಮೂರು ವರ್ಷಗಳ ಹಿಂದೆ ‘ಕಿರಿಕ್ ಪಾರ್ಟಿ’ಯಂತಹ ದೊಡ್ಡ ಹಿಟ್ ಸಿನಿಮಾವನ್ನು ನೀಡಿದ್ದ ರಕ್ಷಿತ್ ಶೆಟ್ಟಿ, ಆನಂತರ ಸಂಪೂರ್ಣವಾಗಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದೊಳಗೆ ತಲ್ಲೀನರಾಗಿದ್ದರು. ಇದೀಗ ಆ ಸಿನಿಮಾ ಸಂಪೂರ್ಣಗೊಂಡು ರಿಲೀಸ್ ಗೆ ರೆಡಿಯಾಗಿದೆ. ಡಿ.27ರಂದು ಪಂಚಭಾಷೆಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ ತೆರೆಗೆ ಬರಲಿದ್ದು, ಅಚ್ಚರಿ ಎಂದರೆ  ಅದೇ ದಿನ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾವೊಂದು ತೆರೆಗೆ ಬರುವ ಸಾಧ್ಯತೆ ಇದೆ

‘ಪೊಗರು’, ಧ್ರುವ ಸರ್ಜಾ ನಾಯಕತ್ವದ ಈ ಸಿನಿಮಾ ಕೂಡ ಕಳೆದ ಎರಡು ವರ್ಷಗಳಿಂದ ಸಾಕಷ್ಟು ತಯಾರಿಗಳೊಂದಿಗೆ ಸಿದ್ಧವಾಗುತ್ತಿದೆ. ಚಿತ್ರಕ್ಕಾಗಿ ನಟ ಧ್ರುವ ಕೂಡ ಶ್ರಮ ಹಾಕಿದ್ದಾರೆ.  ಇದೀಗ ಇವರಿಬ್ಬರ ನಡುವೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos