ರಾಧಿಕಾ ಬರ್ತಡೇಗೆ ಯಶ್ ಏನು ಹೇಳಿದ್ರು?

ರಾಧಿಕಾ ಬರ್ತಡೇಗೆ ಯಶ್ ಏನು ಹೇಳಿದ್ರು?

ನ್ಯೂಸ್ ಎಕ್ಸ್ ಪ್ರೆಸ್, ಮಾ.8: ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್‍. ಪ್ರೀತಿಸಿ ಮದುವೆಯಾದ ಈ ತಾರಾ ಜೋಡಿಗೆ ಕಳೆದ ಡಿಸೆಂಬರ್ ನಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತ್ತು.

ತಾಯಿಯಾದ್ರೂ ನಟಿ ರಾಧಿಕಾ ತಮ್ಮ ಸೌಂದರ್ಯವನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ನಿನ್ನೆ ರಾಧಿಕಾ ಪಂಡಿತ್ ಹುಟ್ಟುಹಬ್ಬ. ಆದ್ರೆ ರಾಧಿಕಾ ಈ ಬಾರಿ ತಮ್ಮ ಬರ್ತಡೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ರು. ಹೀಗಾಗಿ ಅವರು ಯಾವುದೇ ಸಂಭ್ರಮದಲ್ಲಿ ಭಾಗಿಯಾಗಿರಲಿಲ್ಲ.

ಆದ್ರೆ ಮಡದಿಯ ಬರ್ತಡೆಗೆ ಯಶ್‍ ಸ್ಪೆಷಲ್‍ ಆಗಿ ಶುಭಾಶಯ ತಿಳಿಸಿದ್ದಾರೆ. ರಾಧಿಕಾ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿರುವ ಯಶ್ ಪ್ರೀತಿಯಿಂದ ಕೆಲ ಸಾಲುಗಳನ್ನು ಬರೆದಿದ್ದಾರೆ.

‘ ಜೀವನದಲ್ಲಿ ನಾನೇನು ಪಡೆದಿದ್ದೇನೆ ಅನ್ನೋ ಕಾರಣಕ್ಕೆ ಜೀವನ ಸುಂದರವಾಗಿದೆ ಅಂತಾ ಅಲ್ಲ. ಯಾರು ನಮ್ಮ ಜೀವನದಲ್ಲಿದ್ದಾರೆ ಅನ್ನೋ ಕಾರಣಕ್ಕೆ ಜೀವನ ಸುಂದರವಾಗಿದೆ. ನನಗಾಗಿಯೇ ನೀನು ಹುಟ್ಟಿದ್ದೀಯಾ ಅಂತಾ ನನಗನ್ನಿಸುತ್ತಿದೆ. ಹ್ಯಾಪಿ ಬರ್ತಡೆ ಮೈ ಲವ್‍’ ಎಂದು ಪತ್ನಿ ರಾಧಿಕಾ ಬಗ್ಗೆ ಯಶ್‍ ಬರೆದುಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯಶ್‍-ರಾಧಿಕಾ ಫೋಟೋ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos