ರಚಿತಾ ರಾಮ್ ಮನೆಯಲ್ಲಿ ಮದುವೆ ಮಾತುಕಥೆ

ರಚಿತಾ ರಾಮ್ ಮನೆಯಲ್ಲಿ ಮದುವೆ ಮಾತುಕಥೆ

ಬೆಂಗಳೂರು, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಎಲ್ಲಿ ಹೋದರೂ ಕೂಡ ಒಂದೇ ಪ್ರಶ್ನೆ. ನಿಮ್ಮ ಮದುವೆ ಯಾವಾಗ, ಹುಡುಗ ಯಾರು ಅನ್ನೋದು. ಈ ಹಿಂದೆ ರಚಿತಾ ರಾಮ್ ನಾನು ಗೌಡರ ಹುಡುಗನನ್ನೆ ಮದುವೆಯಾಗುತ್ತೇನೆ ಎಂದಿದ್ದರು. ಇದೀಗ ಅವರ ಮನೆಯಲ್ಲಿ ಮದುವೆಯ ಮಾತುಕತೆ ಜೋರಾಗಿ ನಡೆಯುತ್ತಿದೆ. ಹೌದಾ,

ರಚಿತಾ ಮನೆಯಲ್ಲಿ ಮದುವೆ ಮಾತು ಕೇಳಿ ಬರುತ್ತಿದೆ ನಿಜ. ಆದರೆ ಮದುವೆಯಾಗುತ್ತಿರುವುದು ರಚಿತಾ ಅಲ್ಲ, ಅವರ ಬದಲಿಗೆ ಅವರ ಅಕ್ಕಾ ನಿತ್ಯ ರಾಮ್ ಗೆ ಮದುವೆ ಫಿಕ್ಸ್ ಆಗಿದೆ. ರಚಿತಾರಾಮ್ ಅಕ್ಕಾ ನಿತ್ಯರಾಮ್ ಹೊಸ ಜೀವನಕ್ಕೆ ಕಾಲಿಡಲು ಸಿದ್ದವಾಗುತ್ತಿದ್ದಾರೆ. ನಿತ್ಯ ಕೂಡ ಎಲ್ಲರಿಗೂ ಚಿರ ಪರಿಚಿತ. ಕೆಲವೊಂದು ಚಿತ್ರಗಳನ್ನು ಮಾಡಿದ್ದಾರೆ. ನಿತ್ಯ ಮದುವೆಯಾಗುತ್ತಿರೋದು ವಿದೇಶದಲ್ಲಿ ಇರೋ ಗೌಡರ ಹುಡುಗನನ್ನು. ಸೆಪ್ಟೆಂಬರ್  ತಿಂಗಳಿನಲ್ಲಿಯೇ ಮದುವೆ ನಡೆಯಲಿದೆ. ಸದ್ಯ ರಚಿತಾ ರಾಮ್ ಗೆ ಲೈನ್ ಕ್ಲಿಯರ್ ಆಗಿದೆ

ಫ್ರೆಶ್ ನ್ಯೂಸ್

Latest Posts

Featured Videos