ಲಾಕ್‌ ಔಟ್‌ ನಿರಾಶ್ರಿತರಿಗೆ ದಿನಸಿ ಪೂರೈಕೆ

ಲಾಕ್‌ ಔಟ್‌ ನಿರಾಶ್ರಿತರಿಗೆ ದಿನಸಿ ಪೂರೈಕೆ

ಬೊಮ್ಮನಹಳ್ಳಿ, ಮಾ. 28: ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ ಔಟ್‌ ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಕಡು ಬಡವರ ನೆರವಿಗೆ ಹಲವು ರೀತಿಯಲ್ಲಿ ಸಹಕಾರಗಳ ಮಹಾಪೂರವೇ ಹರಿದು ಬರುತ್ತಿದ್ದು ನೈಜ ಬಡವರನ್ನು ಗುರ್ತಿಸಿ ಪಟ್ಟಿ ಮಾಡಿ ಅಕ್ಕಿ ಬೇಳೆ ಹಾಗೂ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುತ್ತಿರುವುದಾಗಿ ಬೊಮ್ಮನಹಳ್ಳಿ ವಿದಾಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಇಂದು ಬೊಮ್ಮನಹಳ‍್ಳಿ ವಿದಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನಿರ್ಗತಿಕರನ್ನು ಈಗಾಗಲೇ ಪಟ್ಟಿ ಮಾಡಲಾಗಿದ್ದು, ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಿಗೆ ಉದಾರ ದಾನಿಗಳಿಂದ ಸಂಗ್ರಹಿಸಲಾಗಿರುವ ಬೇಳೆ, ಅಕ್ಕಿ, ಎಣ್ಣೆ ಸೇರಿದಂತೆ ಗೃಹೋಪಯೋಗಿ ದಿನ ಬಳಕೆಯ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಬಡವರಿಗಾಗಿ ಫ್ರೀ ಫುಡ್ ಸರಬರಾಜು ಘೋಷವಾಕ್ಯದೊಂದಿಗೆ ಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ಬಡವರಿಗೂ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವುದಾಗಿ ಇದೇವೇಳೆ ತಿಳಿಸಿದ ಶಾಸಕ ಸತೀಶ್ ರೆಡ್ಡಿ ಅವರು ಕಷ್ಟ ಕಾಲದಲ್ಲಿರುವ ಸಾರ್ವಜನಿಕರ ನೋವಿಗೆ ಸ್ಪಂದಿಸುವುದು ಜನಪ್ರತಿನಿಧಿಗಳಾದ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಪ್ರತಿ ಬಡವರಿಗೂ ದಿನಸಿ ಪದಾರ್ಥಗಳನ್ನು ಪೂರೈಕೆ ಮಾಡಲು ಸಹಕರಿಸುವಂತೆ ಇದೇ ವೇಳೆ ಸಂಘ ಸಂಸ್ಥೆಗಳಿಗೆ ಕರೆ ನೀಡಿದ ಶಾಸಕ ಸತೀಶ್ ರೆಡ್ಡಿ ಬಡವರ ಕೈಯಲ್ಲಿ ಕೆಲಸವಿಲ್ಲದೆ ದುಡಿಯುವ ಕೈಗಳನ್ನು ಕೊರೋನಾ ಕಟ್ಟಿ ಹಾಕಲಾಗಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ದಾವಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos