ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

  • In State
  • February 22, 2021
  • 170 Views
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೆಸಿಬಿ ಮತ್ತು ಹಿಟ್ಯಾಚಿಗಳ ಮಾಲೀಕರು ಮತ್ತು ಚಾಲಕರು ಎಚ್‌ಎಸ್‌ಆರ್ ಲೇಔಟ್ – ಸರ್ಜಾಪುರ ರಸ್ತೆಯಲ್ಲಿ ಜೆಸಿಬಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜೆಸಿಬಿ ಮಾಲೀಕರ ಸಂಘದ ಅಧ್ಯಕ್ಷ ಮಧು ಮಾತನಾಡಿ, ಇವತ್ತು ಜೆಸಿಬಿ ಸುಮಾರು 30 ಲಕ್ಷ ಬೆಲೆಯುಳ್ಳದ್ದಾಗಿದೆ. ಡೀಸೆಲ್ ರೂ. 87. ಬೆಲೆ ಏರುತ್ತಲೇ ಇದೆ. ಡೀಸೆಲ್ ಬೆಲೆ ಕಡಿಮೆ ಮಾಡುವವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು, ಇದರಿಂದ ಜೆಸಿಬಿ ಮಾಲೀಕರು ಮತ್ತು ಚಾಲಕರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಎಚ್‌ಎಸ್‌ಆರ್ ಲೇಔಟ್‌ನಿಂದ ಸರ್ಜಾಪುರ ರಸ್ತೆವರೆಗೂ ಜೆಸಿಬಿ ಮತ್ತು ಹಿಟ್ಯಾಚಿಗಳನ್ನ ನಿಲ್ಲಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಡೀಸೆಲ್ ಬೆಲೆ ಇಳಿಸಬೇಕೆಂದು ಆಗ್ರಹಿಸಿದರು.
ಒಂದು ಗಂಟೆಗೆ 7 ಲೀಟರ್ ಡೀಸೆಲ್ ಕುಡಿಯುತ್ತೆ ಜೆಸಿಬಿ. ಗ್ರಾಹಕರಿಗೆ ನಾವು ಒಂದು ಘಂಟೆಗೆ ರೂ. 1000 ನಿಗಧಿ ಮಾಡಿದ್ದೇವೆ. ಹಿಂದಿನಂತೆ ನಾವು ಕಡಿಮೆ ಬೆಲೆಗೆ ಜೆಸಿಬಿ ನೀಡುವುದು ಅಸಾಧ್ಯ. ಗ್ರಾಹಕರು ಡೀಸೆಲ್ ಬೆಲೆ ಏರಿಕೆ ಕಂಡರೂ ಹಿಂದಿನ ಬೆಲೆಗೆ ನೀಡುವಂತೆ ತಾಕೀತು ಮಾಡುತ್ತಾರೆ. ಆದರೆ, ಸರ್ಕಾರ ಡೀಸೆಲ್ ಬೆಲೆ ಇಳಿಸುವವರೆಗೂ ನಾವು ಘಂಟೆಗೆ ರೂ. 1000 ಬೆಲೆಯನ್ನೇ ನಿಗಧಿಪಡಿಸುತ್ತಿದ್ದು, ಗ್ರಾಹಕರು ಸಹಕರಿಸಬೇಕೆಂದು ಈ ಪ್ರತಿಭಟನೆ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ.ರಮೇಶ್ ಸೇರಿದಂತೆ ಜೆಸಿಬಿ ಮಾಲೀಕರ ಸಂಘದ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos