ಬಿಬಿಎಂಪಿಯ ಅಸಮಂಜಸ ತೆರಿಗೆ ಬೇಡಿಕೆ ವಿರುದ್ಧ ಪ್ರತಿಭಟನೆ

ಬಿಬಿಎಂಪಿಯ ಅಸಮಂಜಸ ತೆರಿಗೆ ಬೇಡಿಕೆ ವಿರುದ್ಧ ಪ್ರತಿಭಟನೆ

ಬೆಂಗಳೂರು: ಬೆಂಗಳೂರಿನ ಲಕ್ಷಾಂತರ ನಾಗರಿಕರನ್ನು ಅಸಮಂಜಸ ತೆರಿಗೆ ನೋಟಿಸ್ ನೀಡಿರುವ ಬಿಬಿಎಂಪಿ ವಿರುದ್ಧ ಬೆಂಗಳೂರು ನವನಿರ್ಮಾಣ ಪಕ್ಷ ಒಗ್ಗಟ್ಟಿನ ಪ್ರದರ್ಶನದ ಮೂಲಕ ಕರ್ನಾಟಕ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿತು. ಶನಿವಾರ ನಡೆದ ಮಿಶ್ರ ಮಾದರಿಯ ಪ್ರದರ್ಶನದಲ್ಲಿ ಸುಮಾರು ೫೦ ಜನರು ಉಪಸ್ಥಿತರಿದ್ದು ೫೦೦ ಕ್ಕೂ ಹೆಚ್ಚು ಕಾರ್ಯಕರ್ತರು ಆನ್ ಲೈನ್ ಮೂಲಕ ಈ ಸಮಸ್ಯೆಗೆ ತಕ್ಷಣದ ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬೆನ್ಪಿಯ ಸಂಸ್ಥಾಪಕರೂ ಹಾಗೂ ಕಾರ್ಯದರ್ಶಿಆದ ಶ್ರೀಕಾಂತ್ ನರಸಿಂಹನ್ ರವರು “ನಾವು ಈ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರದ ಮದ್ಯಸ್ತಿಕೆಯನ್ನು ಕೋರಲು ನಡೆಸುತ್ತಿದ್ದೇವೆ. ಮುಖ್ಯಮಂತ್ರಿಯವರಿಗು ಮನವಿಯನ್ನು ಸಲ್ಲಿಸಿದ್ದೇವೆ.ಆದರೆ ನಮಗೆ ಈ ಕುರಿತು ಭರವಸೆ ದೊರಕಿದೆಯೇ ಹೊರತು ಪರಿಹಾರ ದೊರಕಿಲ್ಲ. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರಿಗೆ ಇನ್ನೂ ನೋಟಿಸ್ ನೀಡುತ್ತಲೇ ಇದ್ದಾರೆ. ಬಿಬಿಎಂಪಿ ಈ ನಡೆ ಸಾರ್ವಜನಿಕರಲ್ಲಿ ಕೋಪ ಹಾಗೂ ಉದ್ವೇಗವನ್ನು ಉಂಟುಮಾಡಿದೆ. ವಿನಕರಣವಾಗಿ ನಾಗರಿಕರು ದೊಡ್ಡ ಮೊತ್ತದ ತೆರಿಗೆ ಮತ್ತು ದಂಡ ವಿಧಿಸಿ ಆಘಾತಕ್ಕೊಳಗಾಗುವಂತೆ ಮಾಡಿದೆ ಎಂದರು.

ಬಿಎನ್ ಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ವಿಸ್ತ್ರದವಾದ ವರದಿ ಮತ್ತು ೫೦೦೦ ಜನರ ಸಹಿ ಸಂಗ್ರಹಿಸಿ ಮನವಿ ನೀಡಿದೆ. ನಗರದ ಆಸ್ತಿ ಮಾಲೀಕರಿಂದ ಬಿಬಿಎಂಪಿ ಅನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಿ ಕಾರ್ಪೊರೇಷನ್ ವೃತ್ತದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಬೆಂಗಳೂರು ನವನಿರ್ಮಾಣ ಪಾರ್ಟಿ ಸದಸ್ಯರು ಪ್ರತಿಭಟನೆ ನಡೆಸಿದರು.

ಬಿಎನ್ಪಿಯ ಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್, ಪದ್ಮನಾಭನಗರದ ಬಿಎನ್ಪಿಯ ಪ್ರಾದೇಶಿಕ ನಾಯಕರಾದ ಸಿದ್ಧಾರ್ಥ್ ಶೆಟ್ಟಿ, ಬಿಎನ್ಪಿಯ ಪ್ರಚಾರ ಮುಖ್ಯಸ್ಥರಾದ ಲಲಿತಾಂಬ ವಿ., ಬಿಎನ್ಪಿಯ ಯುವ ವಿಭಾಗದ ಮುಖ್ಯಸ್ಥ ರಿಶಿ ರಾಘವನ್ ಅವರು ರ್ಯಾಲಿಯಲ್ಲಿ ಇತರೆ ಕಾರ್ಯಕರ್ತರ ಜೊತೆಗೆ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos