ಬೆಂಗಳೂರು: ರಾಜ್ಯದಲ್ಲಿ ಜಾರಿಯಾಗಿರುವ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಜಾರಿಯಾಗಿರುವ ನಿಟ್ಟಿನಲ್ಲಿ ಹಣದ ಕ್ರೋಢೀಕರಣಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹರಸಾಹಸ ಪಡುತ್ತಿದೆ. ಸರ್ಕಾರ ಆಸ್ತಿನೊಂದನೆಗಾಗಿ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಈಗಾಗಲೇ ಹಾಲು ಎಣ್ಣೆ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಇದೀಗ ಆಸ್ತಿಗಳ ನೋಂದಣಿ ದರ ಹೆಚ್ಚಳಕ್ಕೆ ಮುಂದಾಗಿದೆ. ಈದೀಗ ಅಕ್ಟೋಬರ್ 1 ರಿಂದ ಜಾರಿಯಾಗಲಿದ್ದು, ಶೇಕಡಾ 30ರಷ್ಟು ದರ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ನೋಂದಣಿ ಇಲಾಖೆಯು ಕಾನೂನು ಪ್ರಕಾರ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಬೇಕು ಎನ್ನುವ ನಿಯಮವಿದೆ ಆದರೆ, ಕಳೆದ ಐದು ವರ್ಷಗಳಿಂದ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಮೌಲ್ಯವನ್ನು ಜಾರಿಗೆ ತರಲಾಗುವುದು ಅನಿವಾರ್ಯ ಎಂದರು.
ಹಾಗಾಗಿ ಅದೇ ರೀತಿ ಜಾರಿ ಮಾಡುತ್ತಿದ್ದೇವೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದಾಗ ದರ ಹೆಚ್ಚಳ ಮಾಡುವ ನಿಯಮವಿದೆ ಈ ನಿಯಮಾನುಸಾರ ದರ ಹೆಚ್ಚಳ ಮಾಡುತ್ತೇವೆ ಎಂದು ಸಚಿವ ಕೃಷ್ಣ ಭೈರ ಗೌಡ ಸ್ಪಷ್ಟನೆ ನೀಡಿದ್ದಾರೆ.
ವರದಿಗಾರ
ಎ.ಚಿದಾನಂದ