ಕೃಷಿ ವಿಜ್ಞಾನಿ ಹಾಗೂ ಅಧಿಕಾರಿಗಳಿಂದ ರೈತರಿಗೆ ಸೂಕ್ತ ಸಲಹೆ

ಕೃಷಿ ವಿಜ್ಞಾನಿ ಹಾಗೂ ಅಧಿಕಾರಿಗಳಿಂದ ರೈತರಿಗೆ ಸೂಕ್ತ ಸಲಹೆ

ಔರಾದ: ಕೆವಿಕೆ ವಿಜ್ಞಾನಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಂಚಾರಿ ಸಮೀಕ್ಷೆಯ ತಂಡ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಸೋಮವಾರ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಸಲಹೆ ನೀಡಿದರು.

ಕಳೆದ ಎರಡು ವಾರಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಬೆಳೆಗಳಿಗೆ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರೈತರು ಪ್ರವಾಹದ ಮಟ್ಟ ಕಡಿಮೆಯಾದ ನಂತರ ಜಮೀನುಗಳಲ್ಲಿ ಸೂಕ್ತವಾದ ಸ್ಥಳದಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿ ಗದ್ದೆಗಳಲ್ಲಿ ನಿಂತ ನೀರನ್ನು ಹೊಲದಿಂದ ಆದಷ್ಟು ಬೇಗ ಬಸಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸಂಚಾರಿ ಸಮೀಕ್ಷೆಯ ತಂಡದ ಕೆವಿಕೆ ಮುಖ್ಯಸ್ಥರಾದ ಡಾ. ಸುನೀಲ ಕುಲಕರ್ಣಿ ತಿಳಿಸಿದರು.

ಇತ್ತೀಚ್ಚಿಗೆ ಕೆವಿಕೆ ವಿಜ್ಞಾನಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಂಚಾರಿ ಸಮೀಕ್ಷೆಯ ತಂಡದ ಸದಸ್ಯರು ಔರಾದ ಹಾಗೂ ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸಿ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಸಲಹೆ ನೀಡುತ್ತಾ ಮಾತನಾಡಿದ ಅವರು, ಕೇವಲ 24 ತಾಸು ನೀರಿನಲ್ಲಿ ನಿಂತ ಮುಂಗಾರು ಬೆಳೆಗಳ ಹಾಗೂ ಗಿಡಗಳ ಬುಡಕ್ಕೆ ಕಾರ್ಬನ್‍ಡೈಜಿಮ್ 2 ಗ್ರಾಂ, ಪ್ರತಿ ಲೀ. ನೀರಿಗೆ ಬೆರೆಸಿದ ದ್ರವ ಸುರಿಯಬೇಕು. ಭೂಮಿಯಲ್ಲಿ ಅತಿ ತೇವಾಂಶದಿಂದ ಬೇರುಗಳ ಉಸಿರಾಟದಲ್ಲಿ ವ್ಯತ್ಯಯವಾಗಿ ಹಾಗೂ ಪೋಷಕಾಂಶಗಳ ಹೆಚ್ಚಿನ ಸೋರಿಕೆಯಿಂದಾಗಿ ಎಲ್ಲಾ ಬೆಳೆಗಳಲ್ಲಿ ಎಲೆಗಳು ಹಳದಿಯಾಗುವ ಲಕ್ಷಣಗಳು ಕಂಡು ಬಂದಿದ್ದು, ನೀರಿನಲ್ಲಿ ಕರಗುವ 19:19:19 (ಎನ್ ಪಿ ಕೆ) ರಾಸಾಯನಿಕ ಗೊಬ್ಬರವನ್ನು 10 ಗ್ರಾಂ. ಪ್ರತಿ ಲೀ. ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.

ತೊಗರಿಯಲ್ಲಿ ಪೈಟೋಪ್ತರಾ ಮಚ್ಚೆ ರೋಗ ನಿರ್ವಹಣೆಗಾಗಿ ಮೆಟಲಾಕ್ಸಿಲ್ – ಎಂ.ಝೇಡ್ 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ತಯಾರಿಸಿದ ದ್ರವವನ್ನು ಗಿಡ ತೊಯ್ಯುವಂತೆ ಸಿಂಪಡಿಸಬೇಕು. ತೊಗರಿಯಲ್ಲಿ ಪ್ರಾರಂಭಿಕ ಹಂತದ ಎಲೆ ಚುಕ್ಕೆ ರೋಗ ಬಾಧೆ ಕಂಡು ಬಂದಿದ್ದು ಆದರ ನಿರ್ವಹಣೆಗಾಗಿ ಹೆಕ್ಸಾಕೋನಾಜೋಲ್ 1.0 ಮಿ.ಲೀ ಪ್ರತಿ ಲೀ. ನೀರಿಗೆ ಬೆರೆಸಿ ತಯಾರಿಸಿದ ದ್ರವ ಸಿಂಪಡಿಸಬೇಕು.

ಸೋಯಾಅವರೆ ಬೆಳೆಯಲ್ಲಿ ಕಾಯಿ ಮಚ್ಚೆ ರೋಗದ ಬಾಧೆ ಅಲ್ಲಲ್ಲಿ ಕಂಡು ಬಂದಿದ್ದು ಅದರ ನಿರ್ವಹಣೆಗಾಗಿ ಟ್ರಿಪ್ಲಾಕ್ಸಿಸ್ಟೊಬಿನ್ + ಟೇಬುಕೋನಾಜೋಲ್ ಎಂಬ ಸಂಯುಕ್ತ ಶಿಲೀಂದ್ರ ನಾಶಕವನ್ನು 0.5 ಮಿ.ಲೀ ಪ್ರತಿ ಲೀ ನೀರಿಗೆ ಬೆರೆಸಿ ತಯಾರಿಸಿದ ದ್ರವ ಸಿಂಪಡಿಸಬೇಕು.

ಶುಂಠಿ ಬೆಳೆದ ಜಮೀನಿನಲ್ಲಿ ಹೆಚ್ಚಾದ ನೀರನ್ನು ಹೊರಹಾಕಿ, ಗಡ್ಡೆ ಕೊಳೆ ರೋಗ ಬಾಧಿತ ಗಿಡಗಳನ್ನು ಕಿತ್ತೆsಸೆದು ನಾಶಪಡಿಸಿ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ತಯಾರಿಸಿದ ದ್ರವವನ್ನು ರೋಗ ತುತ್ತಾದ ಹಾಗೂ ಸುತ್ತಮುತ್ತಲಿನ ಗಿಡಗಳ ಬುಡಕ್ಕೆ ಸುರಿಯಬೇಕು. ತಗ್ಗು ಪ್ರದೇಶಗಳಲ್ಲಿ ಪ್ಯಾರಾಗ್ರಾಸ್ ಮೇವಿನ ಬೆಳೆ ಬೆಳೆಯುವುದು ಸೂಕ್ತ. ನದಿ ತೀರದ ಒಂದು ಕಿ. ಮೀ. ವ್ಯಪ್ತಿಯಲ್ಲಿ ವಾಡಿಕೆ ಬೆಳೆ ಬೆಳೆಯುವದಕ್ಕಿಂತ ಭತ್ತವನ್ನು ಬೆಳೆದರೆ ಸೂಕ್ತ. ಎಂದು ರೈತರಿಗೆ ಸಮಗ್ರ ಮಾಹಿತಿ ನೀಡಿದರು. ರೈತರು ಎನೇ ಸಮಸ್ಯೆಗಳಿದ್ದರೂ ನೇರವಾಗಿ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನಿಗಳನ್ನು ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೊರುವಂತೆ ತಿಳಿಸಿದರು.

ಈ ವೇಳೆ ಡಾ. ಆರ್. ಎಲ್. ಜಾಧವ ಬೇಸಾಯ ಶಾಸ್ತ್ರೀಯ ತಜ್ಞರು ಕೃಷಿ ವಿಜ್ಞಾನ ಕೇಂದ್ರ ಬೀದರ್, ಅನ್ಸಾರಿ ಎಂ.ಎ.ಕೆ. ಸಹಾಯಕ ಕೃಷಿ ನಿರ್ದೇಶಕರು ಔರಾದ್, ಚಂದ್ರಕಾಂತ ಉಡಬಾಳ ಕೃಷಿ ಆಧಿಕಾರಿ ಭಾಲ್ಕಿ ಹಾಗೂ ಗಿರೀಶ ಕೃಷಿ ಅಧಿಕಾರಿ ಬೀದರ್ ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos