ಸಮಸ್ಯೆ ಪರಿಹಾರಕ್ಕೆ ಅದ್ಯತೆ

ಸಮಸ್ಯೆ ಪರಿಹಾರಕ್ಕೆ ಅದ್ಯತೆ

ಮಧುಗಿರಿ: ಗ್ರಾಮೀಣ ಭಾಗದಲ್ಲಿರುವ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.
೫೦೦ ಶಿಕ್ಷಕರು ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳ ೨೦ ವರ್ಷಗಳಿಂದ ಹಲವು ರೀತಿಯ ಗುಣಾತ್ಮಕ ಕೌಶಲಭರಿತ ಶಿಕ್ಷಣವನ್ನು ನೀಡಲು ಸತತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ಶಿಕ್ಷಣದ ಎಲ್ಲಾ ಮಜಲುಗಳನ್ನು ಅರಿತಿದ್ದು ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಕಂಡು ಸಾಧ್ಯವಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ.
ನಾನು ಚುನಾವಣೆಗೂ ಮೊದಲು ಕಣದಿಂದ ವಾಪಾಸು ಬರುವುದಾಗಿ ಕೆಲವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾನು ಅಂತಹ ಜಾಯಮಾನದವನಲ್ಲ. ನಾನು ಎ.ಕೃಷ್ಣಪ್ಪ ಅವರೊಂದಿಗೆ ರಾಜಕೀಯ ಕಲಿತು ಬಂದವನು, ನನಗೆ ಚುನಾವಣೆ ಹೇಗೆ ಎದುರಿಸಬೇಕೆಂದು ತಿಳಿದಿದೆ ಎಂದು ಹೇಳಿದರು.
ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ ಮಾತನಾಡಿ, ಹಿಂದುಳಿದ ವರ್ಗದ ಮುಖಂಡರಾದ ಡಿ.ಟಿ.ಶ್ರೀನಿವಾಸ್ ರವರು ಧೈರ್ಯದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಕೇವಲ ನಮ್ಮ ಸಮುದಾಯದವರೆ ಅಲ್ಲದೇ ಹಿಂದುಳಿದವರು, ದಲಿತರು,ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯದ ಪದವೀಧರರು ಮೊದಲ ಪ್ರಾಶಸ್ತ್ಯದ ಮತ ನೀಡುವುದರ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕೆಂದು ಮತಯಾಚಿಸಿದರು.
ಯಾದವ ಸಂಘದ ತಾಲೂಕು ಅಧ್ಯಕ್ಷ ಚಿನ್ನಪ್ಪ, ಖಜಾಂಚಿ ಚಿಕ್ಕಣ್ಣ, ಟಿ. ವಿ .ವಿ ಕಾಲೇಜ್ ಪ್ರಾಂಶುಪಾಲ ಸಿ.ಕೃಷ್ಣಪ್ಪ, ಸಮುದಾಯದ ಮುಖಂಡರಾದ ಎಂ.ವಿ.ಮೂಡ್ಲಿಗಿರೀಶ್, ನಿರಂಜನ್ ದಾಸ್, ರಘು ಯಾದವ್,ಕರಿಯಣ್ಣ, ಮುದ್ದೇಗೌಡ,ಕಂಬಣ್ಣ,ಹಾಗೂ ಶಿಕ್ಷಕರು, ಪದವೀಧರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos