ಆರ್‌ಆರ್‌ಆರ್ ಚಿತ್ರದಲ್ಲಿ ಪ್ರಿಯಾಮಣಿ.?

ಆರ್‌ಆರ್‌ಆರ್ ಚಿತ್ರದಲ್ಲಿ ಪ್ರಿಯಾಮಣಿ.?

ಸ್ಟಾರ್‌ ನಟರೊಂದಿಗೆ ಬೆಳ್ಳಿತೆರೆ ಹಂಚಿಕೊಂಡಿದ್ದ ದಕ್ಷಿಣ ಭಾರತದ‌ ಖ್ಯಾತ ನಟಿ ಪ್ರಿಯಾಮಣಿ, ಹಲವು ತಿಂಗಳ ಬಳಿಕ‌ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಹೌದು, ಮುಸ್ತಾಫ ರಾಜ್ ಅವರೊಂದಿಗೆ ವಿವಾಹವಾದ ಬಳಿಕ ಬಹು ಕಾಲ ಬೆಳ್ಳಿತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದ ಪ್ರಿಯಾಮಣಿ, ಇದೀಗ
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿಬಂದಿದೆ.

ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನುವ ಮಾತಿದ್ದರೂ, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ. ಇನ್ನುಳಿದಂತೆ ಮದುವೆ ಬಳಿಕ ಟಾಲಿವುಡ್ ಚಿತ್ರವೊಂದರಲ್ಲಿ ಪ್ರಿಯಾಮಣಿ ಅಭಿನಯಿಸಿದ್ದು, ಕೆಲ ದಿನದಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos