ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ನವದೆಹಲಿ, ಮಾ. 19: ದೇಶ ಸೇರಿದಂತೆ ರಾಜ್ಯದಲ್ಲೂ ಸಹ ಕೊರೋನಾ ವೈರಸ್ ಹರಡುತ್ತಲೇ ಇದೆ. ಈ ಕೊರೋನಾ ವೈರಸ್  ತಡೆಯಲು ಮಾರ್ಚ್ 31ರವರೆಗೆ ರಾಜ್ಯದಲ್ಲಿ ಮಾಲ್ ಥಿಯೇಟರ್ ಗಳಂತಹ ಜನಸಂದಣಿಯ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಇಂದು ನಡೆಬೇಕಿದ್ದ ಸಿಬಿಎಸ್ಸಿ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳನ್ನ ಸಹ ಮಾರ್ಚ್ 31ರವರೆಗೆ ಮುಂದೂಡಿಕೆಯಾಗಿವೆ.

ಕೊರೊನಾ ಹೆಚ್ಚು ವಿಸ್ತಾರಗೊಳ್ಳುವ ಸಾಧ್ಯತೆ ಇರುವ ಕಾರಣ ಇದಿನಿಂದ ಆರಂಭಗೊಳ್ಳಬೇಕಾಗಿದ್ದ ಸಿಬಿಎಸ್ಸಿ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳು ಮಾರ್ಚ್ 31ರವರೆಗೆ ಮುಂದೂಡಿಕೆಯಾಗಿವೆ.

ದೇಶದಲ್ಲಿ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಸಿಬಿಎಸ್ಇ ಪರೀಕ್ಷೆ ಮಾರ್ಚ್ 31ರವರೆಗೆ ಮುಂದೂಡಿಕೆಯಾಗಿದ್ದು, ತದನಂತರ ಹೊಸ ವೇಳಾಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಆದರೆ ಐಸಿಎಸ್ಇ ಪರೀಕ್ಷೆ ಮುಂದೂಡಿಕೆಯಾಗಿಲ್ಲ. ಇನ್ನು ಯುಜಿಸಿ, ಎಐಸಿಟಿಇ, ಎನ್ಐಒಎಸ್, ಐಐಟಿ ಸೇರಿದಂತೆ ಪ್ರಮುಖ ಪರೀಕ್ಷೆಗಳು ಸಹ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos