ಜಕ್ಕಲದಿನ್ನಿ: ಮಡಿವಾಳ ಮಾಚೀದೇವರ ಭಾವಚಿತ್ರ ಮೆರವಣಿಗೆ

ಜಕ್ಕಲದಿನ್ನಿ: ಮಡಿವಾಳ ಮಾಚೀದೇವರ ಭಾವಚಿತ್ರ ಮೆರವಣಿಗೆ

ಸಿರವಾರ, ಫೆ. 01: ಮಾಡಿವಾಳ ಸಮಾಜದಲ್ಲಿನ ಅನೇಕರು ಕುಲ ಕಸುಬು ನೆಚ್ಚಿಕೊಂಡಿದ್ದಾರೆ, ಅದರ ಬದಲಾಗಿ ಎಲ್ಲಾರೂ ಶಿಕ್ಷಣವಂತರಾಗಿ ಸರ್ಕಾರಿ ಸೌಲಭ್ಯ ಪಡೆದುಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದು ಮಡಿವಾಳ ಸಮಾಜದ ತಾಲೂಕಧ್ಯಕ್ಷ ಹುಚ್ಚಪ್ಪ ಸೈದಾಪೂರು ಹೇಳಿದರು.

ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಮಾಚಿದೇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.

ಸರಕಾರದಿಂದ ಕಡುಬಡವರಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇವುಗಳನ್ನು ಅರಿಯಬೇಕಾದರೆ ಶಿಕ್ಷಣವಂತರಾಗಬೇಕು ಮತ್ತು ಅದರ ಸದುಪಯೋಗ ಪಡೆದುಕೊಳ್ಳಬೇಕು. ಮೇಲು-ಕೀಳು, ತುಳಿತಕ್ಕೆ ಒಳಗಾದ ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದಿ, ಸಮಾಜವನ್ನು ಎತ್ತಿ ಹಿಡಿದ 12ನೇ ಶತಮಾನ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿತ್ತು. ಮಾಚಿದೇವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.

ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿಗರು ಮಡಿವಾಳ ಮಾಚಿದೇವರು. ವಚನಗಳ ಮೂಲಕ ಸಮಾಜದಲ್ಲಿ  ಕಂದಾಚಾರ ಮೂಡನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಮಡಿವಾಳ ಮಾಚೀದವರ ಪ್ರತಿಮೆ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಸಿದ್ದಾರೂಡ ಮಠದ ವರೆಗೂ ಭಾವಚಿತ್ರ  ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಾನ್ವಿ ಮಂಡಲ ಅಧ್ಯಕ್ಷ ಮಲ್ಲುಕಾರ್ಜುನ ಜಕ್ಕಲದಿನ್ನಿ, ಬಿ.ಶರಣಪ್ಪ, ಶಿವರಾಮರೇಡ್ಡಿ, ಮಹಾದೇವಪ್ಪ, ಶೇಖರಪ್ಪ, ಮಲ್ಲಪ್ಪ ಬೊಂಬಾಯಿ, ಮೂಕಯ್ಯ, ಜಕ್ಕಲದಿನ್ನಿ ಗ್ರಾಮದ ಸಮಾಜದ ಅಧ್ಯಕ್ಷ ಮಹೇಶ, ಉಪಾಧ್ಯಕ್ಷ  ರಾಚಯ್ಯ, ಮಲ್ಕಪ್ಪ, ವೆಂಕಟೇಶ, ಬಸವರಾಜ ನಾಗಡದಿನ್ನಿ, ಶರಣಪ್ಪ, ಅಂಬಣ್ಣ, ಆಂಜನೇಯ್ಯ, ಯಮನಪ್ಪ, ಸೂಗರೇಡ್ಡಿ, ಮಹಾಂತೇಶ, ಶೇಖರಪ್ಪ, ಸಂತೋಷ ಪ್ರಭಾಕರ್, ಕರಿಯಪ್ಪ, ಮಲ್ಲಯ್ಯ, ಬಸವಲಿಂಗ, ಮಲ್ಲಯ್ಯ ಸೇರಿದಂತೆ ಗ್ರಾಮದ ಮಡಿವಾಳ ಸಮಾಜದ ಮುಖಂಡರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos