ರೆಫ್ರಿ ಮೇಲೆ ಹಲ್ಲೆ : ಪೂನಿಯಾ ಕೋಚ್ ವಜಾ

ರೆಫ್ರಿ ಮೇಲೆ ಹಲ್ಲೆ : ಪೂನಿಯಾ ಕೋಚ್ ವಜಾ

ಟೋಕಿಯೋ: ಒಲಿಂಪಿಕ್ಸ್ ಆಟದ ವೇಳೆ ಭಾರತದ ಕುಸ್ತಿಪಟು ದೀಪಕ್ ಪೂನಿಯಾರ ವಿದೇಶಿ ಕೋಚ್ ರಷ್ಯಾದ ಮುರಾದ್ ಗೈಡರೋವ್, ರೆಫ್ರಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ.
ಗುರುವಾರ 86 ಕೆಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಸ್ಯಾನ್‌ಮರಿನೋದ ಮೈಲ್ಸ್ ನಝೀಂ ಅಮೀನ್ ವಿರುದ್ಧ ದೀಪಕ್ ಪೂನಿಯಾ ಸೋಲು ಅನುಭವಿಸಿದ್ದು, ಭಾರತದ ಕೋಚ್ ಮುರಾದ್ ಮತ್ತು ರೆಫರೀ ಕೋವಾಲೆಂಕೊ ಮಧ್ಯೆ ಜಗಳ ನಡೆದಿತ್ತು. ಈ ಸಂದರ್ಭದಲ್ಲಿ ಪಂದ್ಯದ ರೆಫ್ರಿಯ ಮೇಲೆ ಕೋಚ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಘಟನೆಯ ಬಗ್ಗೆ ವಿಶ್ವ ಕುಸ್ತಿ ಸಂಘಟನೆಯ ಶಿಸ್ತು ವಿಭಾಗ ಶುಕ್ರವಾರ ಸಭೆ ಸೇರಿ ಈ ಬಗ್ಗೆ ಭಾರತದ ಕುಸ್ತಿ ಫೆಡರೇಷನ್‌ನಿಂದ ವಿವರಣೆ ಕೇಳಿದೆ. ಶಿಸ್ತುಸಮಿತಿ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಪದಕ ಹಿಂದೆ ಪಡೆಯಲು ಮತ್ತು ವಿದೇಶಿ ಕೋಚ್‌ನ ದುರ್ನಡತೆ ಹಿನ್ನೆಲೆಯಲ್ಲಿ ಫೆಡರೇಷನ್‌ಗೆ ನಿಷೇಧ ವಿಧಿಸಲು ಶಿಸ್ತುಸಮಿತಿ ಪಟ್ಟು ಹಿಡಿದಿದೆ ಎನ್ನಲಾಗಿದೆ. ಕೋಚ್ ಅವರನ್ನು ವಜಾಗೊಳಿಸಲಾಗಿದೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos