ದಾಸನಿಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ!

ದಾಸನಿಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ!

ಬಳ್ಳಾರಿ: ಕಳೆದ ಮೂರು ತಿಂಗಳಿನಿಂದ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಇತ್ತೀಚಿಗೆ ವಿಪರೀತ ಬೆನ್ನು ನೋವು ಕಾಡುತ್ತಿದೆ ಎಂದು ಪೊಲೀಸ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ನಡೆದ ದರ್ಶನ್ ಅವರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಬಳ್ಳಾರಿ ಜೈಲಿನಲ್ಲಿಯೇ ದರ್ಶನ್ ಅವರಿಗೆ ಬೆನ್ನು ನೋವಿಗೆ ಫಿಜಿಯೋಥೆರಪಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು, ಶುಕ್ರವಾರ ಸಂಜೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲೇ ದರ್ಶನ್ ಗೆ ಒಂದು ಗಂಟೆ ಫಿಸಿಯೋಥೆರಪಿ ಮಾಡಲಾಗಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ವಿಮ್ಸ್ ಆಸ್ಪತ್ರೆಯ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ ಹಾಗೂ ಫಿಸಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು.

ವೈದ್ಯರ ಸಲಹೆಯಂತೆ ಬುಧವಾರವೇ ದರ್ಶನ್‌ಗೆ ಫಿಸಿಯೋಥೆರಪಿ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಫಿಸಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಸಂಜೆ ಆರೋಪಿ ದರ್ಶನ್ ಗೆ ಫಿಸಿಯೋಥೆರಪಿ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos