ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2019

ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2019

ಕೆ.ಆರ್.ಪುರ, ಅ. 8: ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಸೂಕ್ತ ವೇದಿಕೆಯನ್ನು ಒದಗಿಸುವುದು ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ ಕಾರ್ಯಕ್ರಮದ ಒಂದು ಪರಮುಖ ಉದ್ದೇಶವಾಗಿದೆ ಎಂದು ಫ್ಯಾಷನ್ ಗುರು ಪ್ರಸಾದ್ ಬಿಡಪ್ಪ ಹೇಳಿದರು.

ವೈಟ್ ಫೀಲ್ಡ್ನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ನಡೆದ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2019ರ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಸೇರಿ ದೇಶದ ವಿವಿಧ ನಗರದಲ್ಲಿನ ಅತ್ಯಂತ ಪ್ರತಿಭಾವಂತ ಹಾಗೂ ಅತ್ಯಾಕರ್ಷಕ ಮಾಡೆಲ್ ಅನ್ನು ಕಂಡುಕೊಳ್ಳಲು ನೆರವಾಗುವ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ ಕಾರ್ಯಕ್ರಮವು, ದೇಶದ ಬಹು ನಿರೀಕ್ಷಿತ ಹಾಗೂ ಅತ್ಯಂತ ಪ್ರತಿಷ್ಠಿತ ಆಫ್ಟರ್ ಮಾಡೆಲ್ ತರಬೇತಿ ಕಾರ್ಯಕ್ರಮವಾಗಿ ಈಗಾಗಲೇ ಗುರುತಿಸಿಕೊಂಡಿದೆ ಎಂದರು.

ಬಾಡಿ, ಕನ್ನಡ ಮೂವಿ, ಇಂಟರ್ನ್ಯಾಷನಲ್ ಫೇಸ್ & ಸ್ಕಿನ್ ಎಂ

ಬ ಒಟ್ಟು 8 ವಿಭಾಗಳಿದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ 55

ಸೂಪರ್-ಸ್ಟೈಲಿಷ್ ಸ್ಪರ್ಧೆಗಳು ಮುಂದಿನ ಗ್ಲಾಮರ್ ಐಕಾನ್ ಆಗಿ ಹೊರಹೊಮ್ಮಲು ಗ್ರಾಂಡ್ ತೀವ್ರ ಪೈಪೋಟಿ ನಡೆಸಲಾಗುವುದು ಎಂದರು.

ಬಾಲಿವುಡ್ ಸೂಪರ್ಸ್ಟಾರ್ ಮತ್ತು ಸೂಪರ್ ಮಾಡೆಲ್ ಡಿನೋ ಮೋರಿಯಾ ಗ್ರಾಂಡ್ ಫಿನಾಲೆಯಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಇವರೊಂದಿಗೆ ಫೋಟೋಗ್ರಾಫರ್ ಹೈದರ್ ಖಾನ್, ಏಷ್ಯಾನೆಟ್ ನ್ಯೂಸ್ ಮೀಡಿಯಾ & ಎಂಟರ್ಟೈನ್ಮೆಂಟ್ ಸಿಇಒ ಅಭಿನವ್ ಖಾರೆ, ಫೀನಿಕ್ಸ್ ಮಾರ್ಕೆಟ್ ಸಿಟಿ ಮಾರ್ಕೆಟಿಂಗ್ ವಿಭಾಗದ ವಿ.ಪಿ ರೀತು ಮೆಹ್ತಾ ಸಹ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಇದೇ ವೇಳೆ ಫ್ಯಾಷನ್ ಗುರು ಪ್ರಸಾದ್ ಬಿಡಪ ಅವರು, ಟಾಪ್ ಮಾಡೆಲ್ಗಳನ್ನು ಒಳಗೊಂಡ ಅತ್ಯದ್ಭುತವಾದ ಫ್ಯಾಷನ್ ಶೋ ನಡೆಸಿಕೊಟ್ಟರು.

ದುಬೈ ಮೂಲದ ಕೋರಿಯೋಗ್ರಾಫರ್, ಮ್ಯೂಸೀಷಿಯನ್ ಮತ್ತು ಕಲಾವಿದ ಕೆವಿನ್ ಓಲಿವರ್ ಅವರು ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ ಕಾರ್ಯಕ್ರಮದ ಮುಖ್ಯ ಟ್ರೇನರ್ ಮತ್ತು ಕೋರಿಯೋಗ್ರಾಫರ್ ಆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos