ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಜನ

ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಜನ

ಸೇಡಂ: ಕೆಲವು ದಿನಗಳ ಮಿರಾಮದ ಬಳಿಕ ಸೇಡಂ ತಾಲೂಕಿನಲ್ಲಿ ಎರಡು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕೊರೋನಾ ಸೊಂಕಿತರ ಸಂಖ್ಯೆ ಸೇಡಂನಲ್ಲಿ ಹೆಚ್ಚುತ್ತಾ ಹೊಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಮಳೆರಾಯನ ಆರ್ಭಟಕ್ಕೆ ಜನ ನಲುಗಿ ಹೋಗಿದ್ದಾರೆ
ಪಟ್ಟಣದ ಮಿಸ್ಕಿನಪುರ ಸತ್ತರಿಯಾ ನಗರದಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದ್ದು, ಏರಿಯಾ ಸಂಪೂರ್ಣವಾಗಿ ಜಲವೃತವಾಗಿ ರಸ್ತೆ ಸಂಪರ್ಕಗಳು ಬಂದ್ ಆಗಿವೆ. ಪುರಸಭೆಯಿಂದ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಕ್ಕಿಂತ ಎರಡು ಅಡಿ ಎತ್ತರವಾಗಿ ಅವೈಜ್ಞಾನಿಕವಾಗಿ ಚರಂಡಿ ಮಾಡಿದ್ದು, ನೀರು ಸರಾಗವಾಗಿ ಚರಂಡಿಗೆ ಹೋಗದೆ ರಸ್ತೆಯ ಮೇಲೆ ನಿಂತು ಜನರ ಓಡಾಟಕ್ಕೆ ತೊಂದರೆಯಾಗಿದೆ. ಮಳೆಯು ಹೀಗೆ ಮುಂದುವರೆದರೆ ಅನೇಕ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos