ತಾಜಾ ಸುದ್ದಿಗಳು

  • ಜೆಡಿಎಸ್‌ ವಿರುದ್ದ ಸಿ.ಎಂ.ಇಬ್ರಾಹಿಂ ಹೋರಾಟ

    ಬೆಂಗಳೂರು: ನವೆಂಬರ್ 16ರಂದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ. ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಿಎಂ ಇಬ್ರಾಹಿಂ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು, ಜೆಡಿಎಸ್​​ನಿಂದ ಉಚ್ಛಾಟನೆಯಾದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಇದೀಗ ಕೆರಳಿ ಕೆಂಡವಾಗಿದ್ದಾರೆ.  ಉಚ್ಚಾಟನೆ ಪ್ರಶ್ನಿಸಿ ದಳಪತಿಗಳ ವಿರುದ್ಧ ಕಾನೂನು‌ ಹೋರಾಟಕ್ಕೆ ಇಬ್ರಾಹಿಂ ಮುಂದಾಗಿದ್ದಾರೆ.  ಮುಂದಿನ ಕಾನೂನು ಹೋರಾಟದ ಬಗ್ಗೆ ಸಮಾನ ಮನಸ್ಕರ ಜೊತೆ ಚರ್ಚೆ ನಡೆಸಿರುವ

    READ MORE
  • ಗದಗ: KSRTC ಬಸ್ ಮತ್ತು ಟಾಟಾ ಸುಮೋ ನೇರ ಡಿಕ್ಕಿ 5 ಜನ ದುರ್ಮರಣ

    ಗದಗ: ದೇವರ ದರ್ಶನ ಪಡೆಯಲು ಹೊರಟಿರುವ ಒಂದೇ ಕುಟುಂಬದ 5 ಮಂದಿ ದುರ್ಮರಣ ಹೊಂದಿರುವ ಘಟನೆ ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಕ್ರಾಸ್ ಬಳಿ‌ ಸೋಮವಾರ ನಡೆದಿದೆ. ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠದ ದರ್ಶನಕ್ಕೆ ತೆರಳುತ್ತಿದ್ದ ಟಾಟಾ ಸುಮೋ ವಾಹನದ ಹಿಂಬದಿಯ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಇನ್ನು ಕೆಎಸ್ಆರ್’ಟಿಸಿ ಬಸ್ ಹಾಗೂ ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 3 ಜನ ಮಹಿಳೆಯರು

    READ MORE
  • ಪತ್ರಿಕೋದ್ಯಮ ಒಂದು ಹರಿತವಾದ ಲೇಖನಿ: ಸಚಿವ ಮಹದೇವಪ್ಪ

    ಬೆಂಗಳೂರು: ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಯುವಕ ಯುವತಿಯರು ಪತ್ರಿಕೋದ್ಯಮವನ್ನು ಕಲಿತು ಅದರಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಮೂರು ತಿಂಗಳ ಪತ್ರಿಕೋದ್ಯಮ ತರಬೇತಿ ನೀಡಲಾಯಿತು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಪತ್ರಕರ್ತರಾಗಿ ಹೊರಹೊಮ್ಮಿದ ಯುವಕ ಯುವತಿಯರಿಗೆ ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪ ನವರು ತರಬೇತಿ ಪ್ರಮಾಣ ಪತ್ರವನ್ನು ನೀಡಿ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ತಮ್ಮ ಭವಿಷ್ಯವನ್ನು

    READ MORE
  • ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ, 10 ಜನ ಭಸ್ಮ

    ಬೆಂಗಳೂರು: ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ. ಕೋಟ್ಯಾಂತರ ರೂಪಾಯಿ ಮೌಲ್ಯದ ಪಟಾಕಿ ಸುಟ್ಟು ಭಸ್ಮವಾಗಿದೆ. ಮೂರು ಬೃಹತ್ ಗಾತ್ರದ ವಾಹನ ಮತ್ತು ಐದು ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, 10 ಸಿಬ್ಬಂದಿ ಸಜೀವ ದಹನವಾಗಿದೆ. ಇಂದು ಶನಿವಾರ ಸುಮಾರು ಮಧ್ಯಾಹ್ನದ 3 ಘಂಟೆಯ ಸಮಯ ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಗೋಡೌನ್ ನಲ್ಲಿ ಲೋಡ್ ಮಾಡಿದ್ದ ಪಟಾಕಿ ಸ್ಪೋಟಗೊಂಡಿದೆ. ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಪಟಾಕಿ ಹಾಗೂ

    READ MORE
  • ಸೌದಿ ಯುವರಾಜನಿಗೆ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ಉಡುಗೊರೆ

    ಕರಾಚಿ: ಸೌದಿ ಅರೇಬಿಯಾದ ಯುವರಾಜ್ ಮಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪಾಕಿಸ್ತಾನ ಸರಕಾರ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ನ್ನು ಉಡುಗೊರೆಯಾಗಿ ನೀಡಿದೆ. ಇಂತಹ ಅಪರೂಪದ ಉಡುಗೊರೆಯನ್ನು ಯುವರಾಜ ಯಾವುದೇ ಸಂಕೋಚವಿಲ್ಲದೆ ಸ್ವೀಕರಿಸಿದ್ದಾರೆ. ಶಸ್ತ್ರಾಸ್ತ್ರವನ್ನು ಉಡುಗೊರೆ ಸ್ವೀಕರಿಸುವ ವಿಚಾರದಲ್ಲಿ ಕೆಲವು ಶಿಷ್ಟಾಚಾರಗಳಿರುತ್ತದೆ. ಆದರೆ ಸೌದಿ ಯುವರಾಜ ಸಂತಸದಿಂದಲೇ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ಉಡುಗೊರೆ ಪಡೆದಿದ್ದಾರೆ. ಜರ್ಮನಿಯಲ್ಲಿ ಅಭಿವೃದ್ಧಿ ಪಡೆಸಲಾದ ಗನ್ ನ್ನು ಚಿನ್ನದ ಲೇಪನದೊಂದಿಗೆ ಮಾಡಿಫೈ ಮಾಡಲಾಗಿದೆ

    READ MORE
  • ಅಬುಧಾಬಿ: ಹಿಂದಿ 3ನೇ ಅಧಿಕೃತ ಭಾಷೆ!

    ದುಬೈ: ಅಬುಧಾಬಿ ಕೋರ್ಟ್‌ನಲ್ಲಿ ಹಿಂದಿಯನ್ನು ಮೂರನೇ ಅಧಿಕೃತ ಭಾಷೆಯಾಗಿ ಬಳಕೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಶನಿವಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ದೇಶದ ಜನಸಂಖ್ಯೆಯ ಶೇ.30ರಷ್ಟು ಭಾರತೀಯರೇ ಆಗಿದ್ದರಿಂದ ಅಲ್ಲಿನ ನ್ಯಾಯಾಂಗ ಇಲಾಖೆ ಕೋರ್ಟ್‌ ವ್ಯವಹಾರಗಳಲ್ಲಿ ಅಗತ್ಯ ಸಂದರ್ಭಗಳಲ್ಲಿ ಹಿಂದಿ ಭಾಷಾ ಬಳಕೆ ಮಾಡುವುದೇ ಒಳಿತೆಂಬ ತೀರ್ಮಾನಕ್ಕೆ ಬಂದಿದೆ. ನ್ಯಾಯಾಂಗ ತನಿಖೆ ಹಾಗೂ ವಿಚಾರಣೆ ಸಂದರ್ಭದಲ್ಲಿ ಇದು ಸಹಕಾರಿ ಆಗಲಿದೆ ಎಂಬುದು ಅಲ್ಲಿನ ನ್ಯಾಯಾಂಗ ಇಲಾಖೆ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಹಿಂದಿಯನ್ನು

    READ MORE
  • ವಿಮಾನದಲ್ಲಿ 185 ಪ್ರಯಾಣಿಕರು ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

    ಒಟ್ಟಾವಾ: ಕೆನಡಾದ ಕ್ವಿಬೆಕ್ ಏರ್‌ಪೋರ್ಟ್‌ನಲ್ಲಿ ಒಟ್ಟು 185 ಪ್ರಯಾಣಿಕರು ವಿಮಾನ ಏರಿದ ಕೆಲವೇ ನಿಮಿಷಗಳಲ್ಲಿ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಅಸ್ವಸ್ಥರ ಪೈಕಿ 10 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್ ಟ್ರಾನ್‌ಸ್ಯಾಟ್ ಫ್ಲೈಟ್ 782ರಲ್ಲಿ ಪ್ರಯಾಣಿಸಲು ಅಣಿಯಾಗಿದ್ದ ಎಲ್ಲ ಪ್ರಯಾಣಿಕರು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದರು. ವಿಮಾನ ಟೇಕ್-ಆಫ್ ಆಗುವ ಮೊದಲು ಪ್ರಯಾಣಿಕರಿಗೆ ಕಣ್ಣು ತುರಿಕೆ, ತಲೆ ಸುತ್ತುವಿಕೆ ಹಾಗೂ ವಾಂತಿ ಸಹಿತ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ವರದಿಯಾಗಿದೆ. ಐವರು ಪ್ರಯಾಣಿಕರನ್ನು ತಕ್ಷಣವೇ

    READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು