ತಾಜಾ ಸುದ್ದಿಗಳು

  • ಇಂದು RCB vs KKR ಮುಖಾಮುಖಿ

    ಬೆಂಗಳೂರು: ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನಡುವೆ ಐಪಿಎಲ್ 2024ರ 10ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲುಂಡ ಬಳಿಕ ಪಂಜಾಬ್ ವಿರುದ್ಧ ಗೆದ್ದಿರುವ ಆರ್​ಸಿಬಿ ತವರಿನಲ್ಲಿ ಮತ್ತೊಂದು ಜಯ ಸಾಧಿಸುವ ಹಂಬಲದಲ್ಲಿದೆ. ಇನ್ನೊಂದೆಡೆ KKR ಐಪಿಎಲ್ 2024 ರ ತನ್ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದಿದೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಅಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಹಾಗೂ ಆಂಡ್ರೆ ರಸೆಲ್ ಮೇಲಿದ್ದು, ಈ ಇಬ್ಬರೂ ಆಟಗಾರರು

    READ MORE
  • ಡೆಲ್ಲಿ ಉಡೀಸ್‌ ಕಪ್‌ ಗೆದ್ದಾ RCB ಲೇಡೀಸ್

    ಬೆಂಗಳೂರು: ದೆಹಲಿಯ ಆರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 8 ವಿಕೆಟ್ ಗಳಿಂದ ಅದ್ಭುತ ಗೆಲುವು ಸಾಧಿಸುವ ಮೂಲಕ ತಮ್ಮ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್​ಸಿಬಿ ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 4 ಬಾರಿ

    READ MORE
  • ಇಂದು MI ಹಾಗೂ RCB ಮುಖಾಮುಖಿ

    ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನ ಎಲಿಮಿನೇಟರ್ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು ಈ ಸೀಸನ್​ನಲ್ಲಿ ಎರಡನೇ ಸ್ಥಾನ ಗಳಿಸಿದರೆ ಆರ್​ಸಿಬಿ ಮೂರನೇ ಸ್ಥಾನ ಗಳಿಸಿತು. ಬುಧವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಮತ್ತೊಮ್ಮೆ ಗೆದ್ದು ಫೈನಲ್ ತಲುಪಿದ ಮೊದಲ

    READ MORE
  • IPL 17ನೇ ಆವೃತ್ತಿಯ ಪ್ರೋಮೋ ಬಿಡುಗಡೆ!

    ಬೆಂಗಳೂರು: ಇಂಡಿಯಾ ಪ್ರೀಮಿಯರ್ ಲೀಗ್-ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಚಟುಕು ಕ್ರಿಕೆಟ್ ಸಮರ ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದರ ನಡುವೆಯೇ ಮಾಧ್ಯಮ ಪ್ರಸಾರದ ಅಧಿಕೃತ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ 2024ರ ಮೊದಲ ಪ್ರೋಮೋವನ್ನು ಬಿಡುಗಡೆಯಾಗಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಹೈಲೈಟ್ಸ್ ಮಾಡಲಾಗಿದ್ದು, ಹಿಂದೆಂದೂ ಈ ಸ್ಟಾರ್ ಆಟಗಾರರು ಈ ರೀತಿ ಕಾಣಿಸಿಕೊಂಡಿಲ್ಲ. ಗಾಯದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ

    READ MORE
  • 2ನೇ ಮಗುವಿಗೆ ಜನ್ಮ ನೀಡಿದ ವಿರಾಟ್‌ ದಂಪತಿ

    ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ  ಮತ್ತೊಮ್ಮೆ ಅಪ್ಪನಾಗಿದ್ದಾರೆ. ವಿರುಷ್ಕ ದಂಪತಿಗೆ ಪುತ್ರ ಜನನವಾಗಿದೆ. ಸ್ಟಾರ್ ಜೋಡಿ ಮನೆಗೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ಭಾರತದ ಟಾಪ್ ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಗಂಡು ಮಗುವಿನ ಪೋಷಕರಾಗಿದ್ದಾರೆ. ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಖುಷಿಯ ಸುದ್ದಿಯನ್ನು ಇನ್​ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಇದೀಗ ಗಂಡು

    READ MORE
  • ಸ್ಟಾರ್‌ ಆಟಗಾರರ ದಾಖಲೆಯನ್ನು ಸರಿಗಟ್ಟಿದ ಜಡೇಜಾ!

    ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್‌ ಪಂದ್ಯಗಳಲ್ಲಿ ಈಗಾಗಲೇ 3 ಪಂದ್ಯಗಳಲ್ಲಿ 2-1 ಅಂಕಗಳನ್ನು ಪಡೆದು ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 434 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಲ್‌ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 10 ಬಾರಿ

    READ MORE
  • ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕನ್ನಡಿಗ ಕೆ ಎಲ್

    ಬೆಂಗಳೂರು: ಭಾರತೀಯ ಕ್ರಿಕೆಟ್ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಕೆ.ಎಲ್. ರಾಹುಲ್ ಅವರೊಂದಿಗೆ ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಕೂಡ ಬಂದಿದ್ದರು. ವಿಷಯ ತಿಳಿದು ಸಾವಿರಾರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಶ್ರೀಮಠಕ್ಕೆ ಆಗಮಿಸಿದ್ದರು. ಮಠಕ್ಕೆ ಆಗಮಿಸಿದ್ದ ರಾಹುಲ್ ಅವರನ್ನು ಕಣ್ತುಂಬಿಕೊಂಡರು. ಈ ವೇಳೆ, ಮುಗಿಬಿದ್ದ ಜನರನ್ನು ನಿಯಂತ್ರಿಸಲು ಮಠದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

    READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು