ಗೂಬೆ ಆಕಾರದ ಮೇಕೆ ಮರಿ

  • In State
  • January 16, 2021
  • 297 Views
ಗೂಬೆ ಆಕಾರದ ಮೇಕೆ ಮರಿ

ಕೊರಟಗೆರೆ: ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯು ರೈತನ ದೊಡ್ಡಿಯಲ್ಲಿ ಜನನ ಆಗಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಪಂ ವ್ಯಾಪ್ತಿಯ ವೆಂಗಳಮ್ಮನಹಳ್ಳಿಯ ರೈತ ಕುಮಾರ್ ಎಂಬಾತನ ಮನೆಯಲ್ಲಿ ಜನಿಸಿದೆ.
ಮೇಕೆ ಮರಿಗೆ ನಾಲ್ಕು ಕಾಲುಗಳಿವೆ. ಎರಡು ಕಿವಿಗಳಿವೆ. ಮನುಷ್ಯನ ರೂಪದ ತಲೆ ಇದೆ ಉಳಿದಂತೆ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ. ಗೂಬೆ ಕಣ್ಣಿನಂತೆ ಕಾಣುತ್ತೀರುವ ಮಿಂಚಿನ ನೋಟದ ಮೇಕೆಯ ಕಣ್ಣು ರೈತಾಪಿರ‍್ಗಕ್ಕೆ ಸವಾಲಾಗಿ ಪ್ರಕೃತಿಗೆ ಸವಲಾಗಿರುವ ಪರಿಣಾಮ ನೋಡುಗರ ಗಮನ ಸೆಳೆದಿದೆ.
ರೈತ ಕುಮಾರ್ ಕಳೆದ ವಾರದ ಹಿಂದೆ 14ಸಾವಿರ ವೆಚ್ಚದ ಮೇಕೆ ಖರೀದಿ ಮಾಡಿದ್ದಾನೆ. ಶುಕ್ರವಾರ ಮಧ್ಯಾಹ್ನ ವಿಚಿತ್ರ ರೂಪದ ಮೇಕೆಯ ಜನನದಿಂದ ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos