ಓವರ್‌ಹೆಡ್ ಟ್ಯಾಂಕ್ ನಿರ್ಮಾಣ

ಓವರ್‌ಹೆಡ್ ಟ್ಯಾಂಕ್ ನಿರ್ಮಾಣ

ಪಾವಗಡ, ಡಿ. 04: ತಾಲ್ಲೂಕಿನಾದ್ಯಂತ ತುಂಗಭದ್ರಾ ಕುಡಿಯುವ ನೀರಿನ ಕಾಮಗಾರಿ (ಪೈಪ್ ಲೈನ್) ಬರದಿಂದ ಸಾಗುತ್ತಿದ್ದು, ಪ್ರತಿ ಹಳ್ಳಿಗಳಲ್ಲೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು, 2020 ಮುಂದಿನ ಡಿಸೆಂಬರ್ ಒಳಗೆ ತುಂಗಭದ್ರಾ ನೀರು ಪಾವಗಡಕ್ಕೆ ಬರಲಿದೆ ಎಂದು ರೈತರಲ್ಲಿ ಆಶಾ ಭಾವನೆ ಉಂಟಾಗಿದೆ. ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾ.ಪಂ.ನ ಚನ್ನಸಾಗರದಹಟ್ಟಿಯಲ್ಲಿ ಒವರ್ ಹೆಡ್ ಟ್ಯಾಂಕ್ ನಿರ್ಮಾಣವನ್ನು ಪಶ್ಚಿಮ ಬಂಗಾಳ, ಅಸ್ಸಾಂ, ರಾಜಸ್ಥಾನ್ ಇತರೆ ಕಡೆಗಳಿಂದ ಕಾರ್ಮಿಕರನ್ನು ಹೈದರಾಬಾದಿನ ಮೆಘಾ ಇಂಜಿನಿಯರ್ಸ್  ಕಂಪನಿಯು ಕಾಮಗಾರಿ ನಡೆಸಲು ಸಿಬ್ಬಂದಿಗಳನ್ನು ಕರೆತಂದಿದೆ. ಓವರ್ ಹೆಡ್ ಟ್ಯಾಂಕ್ ಕಳಪೆಯಿಂದ ಕೂಡಿರದೆ ಪಾರದರ್ಶಕವಾಗಿ ಕಾಮಗಾರಿಯನ್ನು ಮಾಡುತ್ತಿರುವುದು ಸಂತೋಷ ಎಂದು ಗ್ರಾಮದ ಮುಖಂಡರಾದ ಶಿವಣ್ಣ, ಚಿತ್ತಯ್ಯರ ಮಾತುಗಳಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos