ಕನ್ನಡಿಗರನ್ನು ಪರಕೀರಾಗಿಸುತ್ತಿರುವ ನಮ್ಮ ಮೆಟ್ರೋ

ಕನ್ನಡಿಗರನ್ನು ಪರಕೀರಾಗಿಸುತ್ತಿರುವ ನಮ್ಮ ಮೆಟ್ರೋ

ಬೆಂಗಳೂರು , ನ. 1: ಕೇವಲ ಹೆಸರಿಗೆ ಮಾತ್ರ ನಮ್ಮ ಮೆಟ್ರೋ, ಇಲ್ಲಿ ಕೆಲಸ ಮಾಡುವ ಬಹುತೇಕರು ನಮ್ಮವರಲ್ಲ. ಅನ್ಯ ಭಾಷಿಕರೇ ತುಂಬಿ ತುಳುಕುತ್ತಿದ್ದಾರೆ. ಪತೂರಿ ಮಾಡಿ ಕನ್ನಡಿಗರನ್ನು ಅವರಾಗೇ ಕೆಲಸ ಬಿಡುವಂತೆ ಮಾಡುವ ಚಾಣಾಕ್ಷ ಅಧಿಕಾರಿಗಳಿದ್ದಾರೆ ಇಲ್ಲಿ.

ನಿಲ್ದಾಣಗಳ ಹೊರಗೆ ನೇತುಹಾಕಿರುವ ಹಿಂದಿ ಫಲಕಗಳ ವಿರುದ್ಧ ಕನ್ನಡಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ದೊಡ್ಡ ಮಟ್ಟದ ಧ್ವನಿ ಎತ್ತುವ ಮೂಲಕ ಬಾಹ್ಯವಾಗಿ ಹಿಂದಿ ಹೇರಿಕೆಗೆ ಕಡಿವಾಣ ಹಾಕುವಲ್ಲಿ ಕೊಚ ಮಟ್ಟಿಗೆ ಯಶಸ್ವಿಯಾಯಿತು.

ಬೆಂಗಳೂರು ಮೆಟ್ರೋ ರೈಲು ನಿಗಮದ ಒಳಗೆ ಸದ್ದಿಲ್ಲದೆ ಹಿಂದಿ ನುಸುಳುತ್ತಿದೆ. ಬ್ಯಾಂಕಿಂಗ್, ರೈಲ್ವೆಯಂತಹ ವಿವಿಧ ಇಲಾಖೆಗಳ ನೇಮಕಾತಿಯಲ್ಲಿನ ಉತ್ತರ ಭಾರತದ ಪ್ರಾಬಲ್ಯ ನಿಧಾನವಾಗಿ ಮೆಟ್ರೊಗೂ ವಿಸ್ತರಣೆ ಆಗುತ್ತಿದೆ. ಈ ಮೂಲಕ ಆಯಕಟ್ಟಿನ ಜಾಗಗಳಲ್ಲಿ ಕನ್ನಡಿಗರ ಧ್ವನಿ ಕ್ಷಿಣಿಸುತ್ತಿದೆ.

ಮೂಲಗಳ ಪ್ರಕಾರ ಮೆಟ್ರೋ ಯೋಜನೆ ಮತ್ತು ಪ್ರಾಜೆಕ್ಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುವವರ ಪೈಕಿ ಶೇ. 70ಕ್ಕೂ ಅಧಿಕ ಪರಭಾಷಿಕರೇ ಇದ್ದಾರೆ. ಪ್ರಮುಖ ಹುದ್ದೆಗಳು ರೈಲ್ವೆ ಇಲಾಖೆಯಲ್ಲಿ ನಿವೃತ್ತರಾದವರು, ಸ್ವಯಂ ನಿವೃತ್ತರು, ನಿಯೋಜನೆಯಾಗಿ ಬಂದವರು, ಗುತ್ತಿಗೆದಾರರ ಮೂಲಕ ನುಸುಳಿದವರ ಪಾಲಾಗುತ್ತಿವೆ.

ಕನ್ನಡಿಗರು ನಮ್ಮ ಮೆಟ್ರೋದಿಂದ ವಿಮುಖರಾಗಲು ಕಾರಣ ನೈಪುಣ್ಯತೆಯ  ಬೆಳವಣಿಗೆ ಇಲ್ಲದಿರುವುದು, ಸೂಕ್ತ ಸೌಲಭ್ಯಗಳನ್ನು ನೀಡದಿರುವುದು ಹಾಗೂ ಅನನುಭವಿಗಳನ್ನು ತಮ್ಮ ಮೇಲೆ ತಂದು ಕೂರಿಸುತ್ತಿರುವುದು.

ತಾರತಮ್ಯ ಪ್ರಶ್ನಿಸುವಂತಿಲ್ಲ!

ಭದ್ರತೆ, ವೇತನ ಬಡ್ತಿ, ರಜೆ ಮತ್ತಿತರ ಸೌಲಭ್ಯಗಳಂತೂ ನಿಯಮಾನುಸಾರ ನೀಡುತ್ತಿಲ್ಲ್ಲ. ಬಡ್ತಿ ವಿಚಾರದಲ್ಲಂತೂ ಯಾವುದೇ ನಿಯಮಾವಳಿಗಳಿಲ್ಲ. ಹತ್ತು ವರ್ಷಗಳ ಹಿಂದೆ ಜನರಲ್ ಕನ್ಸಲ್‌ಟೆಂಟ್‌ಲ್ಲಿ ಸಹಾಯಕ ಎಂಜಿನಿಯರ್‌ಗಿಂತ ಕೆಳಗಿದ್ದವರು ಇಂದು ಹೆಚ್ಚುವರಿ ಎಂಜಿನಿಯರ್ ಆಗಿದ್ದಾರೆ.

ಈ ತಾರತಮ್ಯಗಳ ಬಗ್ಗೆ ಪ್ರಶ್ನಿಸಿದರೆ, ನಾವೇ ಟಾರ್ಗೆಟ್ ಆಗುತ್ತೇವೆ. ಯಾಕೆಂದರೆ, ನಮ್ಮಲ್ಲಿ ಸಂಘಟನೆ ಇಲ್ಲ. ಗುತ್ತಿಗೆ ಪದ್ಧತಿಯನ್ನೂ ಸರಿಯಾಗಿ ಅನುಸರಿಸದಿರುವುದರಿಂದ ಬೇಸತ್ತು ಬಿಟ್ಟುಹೋಗುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ತಾಂತ್ರಿಕ ಯೋಜನಾ ವಿಭಾಗದ ನೌಕರರೊಬ್ಬರು ಇಲ್ಲಿನ ಶೋಷಣೆ ಬಿಚ್ಚಿಟ್ಟರು.

ನಿವೃತ್ತರ ಸ್ವರ್ಗ

ಸಹಾಯಕ ಎಂಜಿನಿಯರ್‌ಗಳಿಂದ ಹಿಡಿದು ಪ್ರಧಾನ ವ್ಯವಸ್ಥಾಪಕ ಹುದ್ದೆವರೆಗೂ ವಿವಿಧ ಹಂತಗಳಲ್ಲಿನ ಹುದ್ದೆಗಳಿಗೆ ನಿವೃತ್ತರನ್ನು ತಂದು ತುಂಬಿಕೊಳ್ಳಲಾಗುತ್ತಿದೆ.ಜೊತೆಗೆ ತಾರತಮ್ಯ ಅನುಸರಿಸಲಾಗುತ್ತಿದೆ. ಮಾನವ ಸಂಪನ್ಮೂಲ ವಿಭಾಗದಲ್ಲಿ ಪ್ರಮುಖ ಹುದ್ದೆಗಳಿಗೆ ಕನಿಷ್ಠ ಸ್ನಾತಕೋತ್ತರ ಪೂರೈಸಿರಬೇಕು. ಇದೇ ರೀತಿ ವಿವಿಧ ವಿಭಾಗಗಳಲ್ಲಿ 3೦೦ಕ್ಕೂ ಅಧಿಕ ಜನ ಇದ್ದಾರೆ. ಶೇ. ೫೦ರಷ್ಟು ಸಿಬ್ಬಂದಿ ೬೦ ವರ್ಷ ಮೇಲ್ಪಟ್ಟವರು ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕನ್ನಡಿಗರ ಮೇಲೆ ಪಿತೂರಿ

ಒಂದೆಡೆ ಅನುಭವಿ ಕನ್ನಡಿಗರ ವಲಸೆ ಮತ್ತೂಂದೆಡೆ ಅನನುಭವಿಗಳ ಸೇರ್ಪಡೆ ಯೋಜನೆ ಪ್ರಗತಿ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ಮೆಟ್ರೋ ಎರಡನೇ ಹಂತದ ವಿಸ್ತರಣಾ ಮಾರ್ಗಗಳನ್ನು2015-16ರಲ್ಲೇ ಟೆಂಡರ್ ನೀಡಲಾಗಿದೆ.ಆದರೆ ಈ ವರಗೂ ಸಂಚಾರಕ್ಕೆ ಮುಕ್ತವಾಗಿಲ್ಲ.ಕಾರಣ ನುರಿತ ಕನ್ನಡಿಗರನ್ನು ಕೆಲಸದಿಂದ ಬಿಡುವಂತೆ ಪಿತೂರಿ ಮಾಡುತ್ತಿರುವ ಅನ್ಯ ಭಾಷಿಕರ ಕೈ ಮೇಲಾಟ ಎಂದು ಇಲ್ಲಿನ ನೌಕರರೇ ಬಹಿರಂಗಪಡಿಸಿದ್ದಾರೆ.

ನೋಟಿಫಿಕೇಷನ್ ಹೊರಡಿಸದೆ, ನಿಯಮಬಾಹಿರವಾಗಿ ಯಾವುದೇ ನೇಮಕಾತಿ ಮಾಡಿಲ್ಲ. ಅನುಭವದ ಆಧಾರದ ಮೇಲೆ ರೈಲ್ವೆಯಿಂದ ನಿವೃತ್ತರಾದ ನೂರಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಅದನ್ನೂ ನಿಯಮದ ಪ್ರಕಾರ ಮಾಡಲಾಗಿದೆ. ಅಷ್ಟಕ್ಕೂ ಅವರೆಲ್ಲಾ ನಿಗಮದ ಆರಂಭದಿಂದಲೂ ಇದ್ದಾರೆ. ಮುಖ್ಯ ಎಂಜಿನಿಯರ್ ಹಂತದವರು ಬೇಕಾಗುತ್ತದೆ. ಅಂತಹವರು ಯಾರೂ ಬರದಿದ್ದಾಗ ಏನು ಮಾಡೋದು?.

 

 

 

ಫ್ರೆಶ್ ನ್ಯೂಸ್

Latest Posts

Featured Videos