“ನಮ್ಮ ಹುಡುಗರು” ಟೀಸರ್ ಬಿಡುಗಡೆ

  • In State
  • August 18, 2021
  • 40 Views
“ನಮ್ಮ ಹುಡುಗರು” ಟೀಸರ್ ಬಿಡುಗಡೆ

ನಿರಂಜನ್ ಸುಧೀಂದ್ರ ನಾಯಕನಟನಾಗಿ ಅಭಿನಯಿಸುತ್ತಿರುವ “ನಮ್ಮ ಹುಡುಗರು” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡ ಆದಷ್ಟು ಬೇಗ ಥಿಯೇಟರ್‌ಗೆ ಕರೆ ತರಲು ಮುಂದಾಗಿದ್ದಾರೆ.
ನಿರಂಜನ್ ಅಭಿನಯದ ಎರಡನೇ ಚಿತ್ರದ ಕೆಲಸಗಳು ಭಾರಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇದರ ನಡುವೆಯೇ ಸದ್ದಿಲ್ಲದೇ ಮೂರನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಔಟ್ ಅಂಡ್ ಔಟ್ ಆಕ್ಷನ್ ಕಂ ಥ್ರಿಲ್ಲರ್ ಚಿತ್ರವನ್ನು “ತ್ರಿವಿಕ್ರಮ್ ಪ್ರೋಡಕ್ಷನ್ಸ್’ಬ್ಯಾರ‍್ನಲ್ಲಿ ತ್ರಿವಿಕ್ರಮ್ ಸಾಫಲ್ಯ ನಿರ್ಮಿಸುತ್ತಿದ್ದಾರೆ. ಮಾಳಿಯಾಳಂನ ಸೌಮ್ಯ ಮೆನನ್ ನಾಯಕಿಯಾಗಿ ಚಿತ್ರದ ಮೂಲಕ ಕನ್ನಡಕ್ಕೆ ಪಾರ್ದಾಪಣೆ ಮಾಡಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಆಯೋಜಿಸಲಿದ್ದಾರೆ. ಆಗಸ್ಟ್ 20 ರಂದು ನಿರಂಜನ್ ಹುಟ್ಟುಹಬ್ಬದಂದು ಟೈಟಲ್ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದು, ಸಪ್ಟೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos