ನಾಳೆಯಿಂದ ಸಾವಯವ-ಸಿರಿಧಾನ್ಯ ಮೇಳ

ನಾಳೆಯಿಂದ ಸಾವಯವ-ಸಿರಿಧಾನ್ಯ ಮೇಳ

ಬೆಳಗಾವಿ, ಜ. 24: ನಾಳೆಯಿಂದ 2 ದಿನಗಳ ಕಾಲ ಸಾವಯವ-ಸಿರಿಧಾನ್ಯ ಮೇಳದ ಅಂಗವಾಗಿ ಇಂದು ಸಾವಯವ-ಸಿರಿಧಾನ್ಯ ನಡಿಗೆ ನಡೆಯಿತು. ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಾದ ಲಕ್ಷ್ಮಣ ಸವದಿ ಅವರು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಾವಯವ-ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಯವ-ಸಿರಿಧಾನ್ಯ ಕುರಿತು ಜಾಗೃತಿ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ. ಅವರ ಮನವೊಲಿಸಿ ಸಾವಯವ ಕೃಷಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಮೇಳವನ್ನು ಆಯೋಜಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ರಸಗೊಬ್ಬರಗಳ ಅತೀಯಾದ ಬಳಕೆಯಾಗುತ್ತಿದೆ. ಆರೋಗ್ಯಕರ ಆಹಾರದ ಕಡೆ ಗಮನಹರಿಸಬೇಕಿದೆ. ರಾಸಾಯನಿಕ ಬಳಕೆಯಿಂದ ನಮ್ಮ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ಹಿರಿಯರು ನೀಡಿದ ಭೂಮಿ ರಕ್ಷಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕರೆ ನೀಡಿದರು.

ಸಾವಯವ-ಸಿರಿಧಾನ್ಯ ಮೇಳದ ಜತೆಗೆ ಫಲಪುಷ್ಪ ಪ್ರದರ್ಶನ-2020 ಕೂಡ ನಡೆಯಲಿದ್ದು, ಸಾರ್ವಜನಿಕರು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಜಂಟಿ ನಿರ್ದೇಶಕರಾದ ಜಿಲಾನಿ ಮೊಖಾಶಿ, ಉಪ ನಿರ್ದೇಶಕರಾದ ಎಚ್.ಡಿ.ಕೋಳೆಕರ, ತೋಟಗಾರಿಕೆ ಉಪ ನಿರ್ದೇಶಕ ರವೀಂದ್ರ ಹಕಾಟಿ ಮತ್ತಿತರರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos