ಅಂತರಾಷ್ಟ್ರೀಯ ವಲಸೆ ಕೇಂದ್ರಗಳ ಆರಂಭ

  • In State
  • December 30, 2020
  • 199 Views
ಅಂತರಾಷ್ಟ್ರೀಯ ವಲಸೆ ಕೇಂದ್ರಗಳ ಆರಂಭ

ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಂತರಾಷ್ಟ್ರೀಯ ವಲಸೆ ಕೇಂದ್ರಗಳ ನೂತನ ಕಚೇರಿ ಬನ್ನೇರುಘಟ್ಟದಲ್ಲಿ ಆರಂಭವಾಗಿದ್ದು, ಉಪಮುಖ್ಯಮಂತ್ರಿ ಸಿ. ಅಶ್ವಥ್ ನಾರಾಯಣ್ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರತ್ನ ಪ್ರಭ ಉದ್ಘಾಟಿಸಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಂತರಾಷ್ಟ್ರೀಯ ವಲಸೆ ಕೇಂದ್ರವು ಕೈ ಗಾರಿಕೆಗಳು ಹಾಗೂ ಕೈಗಾರಿಕೆಗಳ ಸಂಘದಲ್ಲಿ ಕೌಶಲ್ಯ ಹಾಗೂ ಉದ್ಯೋಗ ಕೈಗಾರಿಕೆಗಳನ್ನು ಉದ್ಯೋಗದೊಂದಿಗೆ ಜೋಡಿಸುವುದು, ಪೀಣ್ಯ ಕೈಗಾರಿಕೆಗಳ ಸಂಘ ಸ್ಥಾಪನೆ ಕೌಶಲ್ಯ ಕೊರತೆ ಅಂತರ ಕಡಿಮೆ ಮಾಡುವ ಉದ್ದೇಶ ಹೊಂದಿರುವ ಸಿಎಮ್‌ಕೆಕೆವೈ ಕಾರ್ಯಕ್ರಮ ಅನುಷ್ಠಾನ, ಕಿರಿಯ ತಾಂತ್ರಿಕ ಶಾಲೆ, ಟೀಮ್ ಲೀಸ್ ಸ್ಕಿಲ್ ಯುನಿವರ್ಸಿಟಿ ಅವರ ಸಹಯೋಗದೊಂದಿಗೆ ಅಪ್ರೆಂಟಿಶಿಪ್ ಕಾರ್ಯಕ್ರಮದ ಮುಖಾಂತರ ತರಬೃತಿ ಹಾಗೂ ಉದ್ಯೋಗ ನೀಡುವುದು, ಸರ್ಕಾರಿ ಐಟಿಐಗಳಲ್ಲಿ ಓದುತ್ತಿರುವ ಮಕ್ಕಳ ಮನಸ್ಥಿತಿಯನ್ನು ಉದ್ಯಮಶೀಲರನ್ನಾಗಿ ಪರಿವರ್ತಿಸುವ ಉದಯಮ್ ಲರ್ನಿಂಗ್ ಫೌಂಡೇಶನ್, ಸರ್ಕಾರಿ ಐಟಿಐ ಸಂಸ್ಥೆಗಳ ಉನ್ನತ್ತೀಕರಣ, ದೇವದಾಸಿ ಹಾಗೂ ಮಂಗಳಮುಖಿ ಸಮುದಾಯದಕ್ಕೆ ಬೆಂಬಲ ಸೇರಿದಂತೆ ಇನ್ನಿತರ ಉದೇಶಗಳನ್ನು ಈ ಕೇಂದ್ರ ಹೊಂದಿದೆ.
ಇದರ ಜೊತೆಗೆ ಇದೇ ವೇಳೆ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ಒಡಂಬಡಿಕೆಗಳಿಗೆ ಸಹಿ ಮಾಡಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos