ನವ ದಂಪತಿಗೆ ಈರುಳ್ಳಿ ಉಡುಗೊರೆ!

ನವ ದಂಪತಿಗೆ ಈರುಳ್ಳಿ ಉಡುಗೊರೆ!

ಬಾಗಲಕೋಟೆ , ಡಿ. 7: ಹುಡುಗ-ಹುಡುಗಿ ಮದುವೆ ಸಂಭ್ರಮದಲ್ಲಿದ್ದರು. ವಿವಾಹ ಎಂದಮೇಲೆ ನೆಂಟರಿಂದ ಉಡುಗೊರೆ ಬುರುವುದು ಸಾಮಾನ್ಯ. ಅದೇ ರೀತಿ ಜೋಡಿಯ ಮದುವೆಗೂ ಅನೇಕರು ಉಡುಗೊರೆಗಳನ್ನು ನೀಡಿದ್ದರು.

ದಂಪತಿಗೆ ಒಂದು ಗಿಫ್ಟ್ ಬಾಕ್ಸ್ ಕೊಟ್ಟ ಗೆಳೆಯರು ಬಾಕ್ಸ್ ತೆಗೆದು ನೋಡುವಂತೆ ಸೂಚಿಸಿದ್ದಾರೆ. ತೆಗೆದು ನೋಡಿದರೆ ದುಬಾರಿ ಈರುಳ್ಳಿ. ಈ ದುಬಾರಿ ಗಿಫ್ಟ್ ನೋಡಿ ಎಲ್ಲರೂ ನಸು ನಕ್ಕಿದ್ದಾರೆ.

ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೋಲ್ಸೇಲ್ನಲ್ಲಿ ಕೆಜಿಗೆ 150 ರೂಪಾಯಿಯಂತೆ ಈರುಳ್ಳಿ ಮಾರಾಟವಾಗುತ್ತಿದ್ದು, ಹಾಪ್ಕಾಮ್ಸ್ನಲ್ಲಿ 165-170 ರೂ.ಗೆ ಕೆಜಿ ಈರುಳ್ಳಿ ದೊರೆಯುತ್ತಿದೆ. ಈರುಳ್ಳಿ ತೋಟಕ್ಕೆ ರೈತರು ಕಾವಲು ಕಾಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಮದುವೆಗೆ ಈ ದುಬಾರಿ ತರಕಾರಿ ಗಿಫ್ಟ್ ನೀಡಿದ ವಿಡಿಯೋ ಈಗ ಸದ್ದು ಮಾಡಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos