ಮದುವೆಗೆ ಈರುಳ್ಳಿ-ಬೆಳ್ಳುಳ್ಳಿ ಹಾರ..!

ಮದುವೆಗೆ ಈರುಳ್ಳಿ-ಬೆಳ್ಳುಳ್ಳಿ ಹಾರ..!

ಉತ್ತರ ಪ್ರದೇಶ, ಡಿ. 14: ಮದುವೆ ಮಂಟಪದಲ್ಲಿ ಸಾಮಾನ್ಯವಾಗಿ ಗಂಡು ಹೆಣ್ಣು ಹೂಮಾಲೆ ಬದಲಾಯಿಸಿಕೊಳ್ಳುವುದು ಸಾಮಾನ್ಯ, ಆದರೆ ಹೂವುಗಳಿಗೆ ಬದಲಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಹಾರ ಬದಲಾಯಿಸುವ ಮೂಲಕ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದಿದ್ದಾರೆ.  ಅಷ್ಟೇ ಅಲ್ಲ ಮದುವೆಗೆ ಶುಭಕೋರಲು ಬಂದವರು ಈರುಳ್ಳಿ ಬುಟ್ಟಿ ಕೊಟ್ಟು ನೂತನ ವಧು-ವರರನ್ನ ಆಶೀರ್ವದಿಸಿದ್ದಾರೆ. ಯಾರ ಕೈಯಲ್ಲಿ ನೋಡಿದರು ಈರುಳ್ಳಿ ಬುಟ್ಟಿಯೇ ಕಾಣಿಸ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಮಾಜವಾದಿ ಪಕ್ಷದ ಮುಖಂಡ ಕಮಲ್ ಪಾಟೀಲ್, ಈರುಳ್ಳಿ ಬೆಲೆ ಗಗನಕ್ಕೇರಿದೆ. ಕಳೆದ ತಿಂಗಳಿಂದ ಜನ ಈರುಳ್ಳಿಯನ್ನ ಚಿನ್ನ ಎಂದೇ ಬಾವಿಸಿದ್ದಾರೆ. ಈ ಮದ್ವೆಯಲ್ಲಿ ಈರುಳ್ಳಿ- ಬೆಳ್ಳುಳಿ ಹಾರ ಮಾಡಿಕೊಂಡಿದ್ದು, ಇನ್ನೂ ವಿಶೇಷ ಅನ್ನಿಸುತ್ತಿದೆ ಎಂದು ಹೇಳಿದರು. ಮತ್ತೊಬ್ಬ ಸಮಾಜವಾದಿ ಮುಖಂಡ ಮಾತನಾಡಿ, ಈ ಜೋಡಿ ಈರುಳ್ಳಿ- ಬೆಳ್ಳುಳಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಬೆಲೆ ಏರಿಕೆ ವಿರುದ್ಧವಾಗಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos