ರಾಜಕಾರಣಿಗಳಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯಾ

ರಾಜಕಾರಣಿಗಳಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯಾ

ತುಮಕೂರು, ಮಾ. 28: ರಾಜ್ಯದಲ್ಲಿ ಕೊರಾನ ಲಾಕ್ ಡೌನ್ ಡೌನ್ ಆದೇಶವಿದ್ದು, ದಾರಿಯಲ್ಲಿ ಯಾರೇ ಅನವಶ್ಯಕವಾಗಿ ಓಡಾಡಿದರು ಕೂಡ ಪೋಲಿಸರು ಹಿಗ್ಗಾಮುಗ್ಗ ಹೊಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ರಾಜಕಾರಣಿಗಳಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯಾ ಅನ್ನೋ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಹೌದು, ಇಡೀ ರಾಜ್ಯಕ್ಕೆ ರಾಜ್ಯವೇ, ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದ್ದು, ಜನಸಾಮಾನ್ಯ ಅನವಶ್ಯಕವಾಗಿ ಹೊರಗಡೆ ತಿರುಗಾಡಿದರೇ ಅಥಾವ ಓಡಾಡಿದರೆ ಪೋಲಿಸರು ಲಾಠಿ ಚಾರ್ಚ್ ಮಾಡುವುದು, ಇಲ್ಲ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮಾತ್ರ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ತಮ್ಮ ಮೊಮ್ಮಗನೊಂದಿಗೆ ಕಾಲ ಕಳೆದಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭೆಯ ಶಾಸಕ ಶ್ರೀನಿವಾಸ್ ಅವರು ಲಾಕ್‌ಡೌನ್ ನಿಯಮವನ್ನು ಮೀರಿ ತಮ್ಮ ಮೊಮ್ಮಗನೊಂದಿಗೆ ರಸ್ತೆಯಲ್ಲಿ ಆಟವಾಡಿರುವ ಘಟನೆ ವಿಡಿಯೋವೊಂದು ವೈರಲ್ ಆಗಿದೆ. ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿರುವ ಎಸ್ ಪಿ ಕಚೇರಿಯ ಮುಂಭಾಗದಲ್ಲೇ ಶಾಸಕರು ಲಾಕ್ ಡೌನ್ ನಿಯಮವನ್ನು ಮೀರಿ ನಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಶಾಸಕರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಕ್ಕಳಾಡುವ ಕಾರಿನಲ್ಲಿ ತಮ್ಮ ಮೊಮ್ಮಗನನ್ನು ಕೂರಿಸಿರುವ ಶಾಸಕರು ರಸ್ತೆಯಲ್ಲಿ ನಿಂತುಕೊAಡಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ಖುದ್ದು ಶಾಸಕರು ಮಾಹಿತಿ ನೀಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos