ಕೊರೋನಾ ​ಗೆ ವೃದ್ಧ ಬಲಿ

  • In State
  • April 4, 2020
  • 193 Views
ಕೊರೋನಾ ​ಗೆ ವೃದ್ಧ ಬಲಿ

ಬಾಗಲಕೋಟೆ,ಏ.4: ಕೊರೋನಾ ​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.  ಬಾಗಲಕೋಟೆಯಲ್ಲಿ 75 ವರ್ಷದ ವೃದ್ಧ ಕೊರೋನಾ ವೈರಸ್​​ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮೃತ ವೃದ್ಧ ಯಾವುದೇ ವಿದೇಶ ಪ್ರಯಾಣ ಮಾಡಿರವ ಇತಿಹಾಸ ಹೊಂದಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ಈ ವ್ಯಕ್ತಿ ದೆಹಲಿಯ ತಬ್ಲಿಘೀ -ಇ-ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲೂ ಸಹ ಭಾಗವಹಿಸಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿನ್ನೆ ಆರೋಗ್ಯಾಧಿಕಾರಿಗಳು ವೃದ್ಧನ ಕುಟುಂಬಸ್ಥರನ್ನು ಪರೀಕ್ಷೆಗೊಳಪಡಿಸಿದ್ದರು. ಬೆಂಗಳೂರಿನಲ್ಲಿ ಬಂದಿದ್ದ ಮಗನಿಂದಲೇ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಮಗನ ವರದಿಯೂ ನೆಗೆಟಿವ್​ ಬಂದಿರುವ ಹಿನ್ನೆಲೆ, ವೃದ್ಧನಿಗೆ ಸೋಂಕು ಹೇಗೆ ಹರಡಿತ್ತು ಎಂಬುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos