ಹಗಲು ದರೋಡೆಯಲ್ಲಿ ಅಧಿಕಾರಿಗಳು

ಹಗಲು ದರೋಡೆಯಲ್ಲಿ ಅಧಿಕಾರಿಗಳು

ಚಿಂಚೋಳಿ: ಬೀದರ್ ಹೆದ್ದಾರಿಯ ದೇಗಲಮಡಿ ಕ್ರಾಸ್ ಹತ್ತಿರ ನಿಯಮಬಾಹಿರವಾಗಿ ನೂತನವಾಗಿ ಟೋಲ್ ವಸೂಲಿ ಕೇಂದ್ರವು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ತಾಲ್ಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಚಿಂಚೋಳಿ ವತಿಯಿಂದ ಪಕ್ಷಾತೀತವಾಗಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆನಂದ್ ಟೈಗರ್ ನಾವು ಈಗಾಗಲೇ ದಂಡಾಧಿಕಾರಿಗಳಿಗೆ ಸ್ಥಳೀಯರಿಗೆ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವಂತೆ ಮನವಿಪತ್ರ ಸಲ್ಲಿಸಿದೆವು ಅದರಂತೆ ಸ್ಥಳೀಯರಿಗೆ ಟೋಲ್ ಕೇಂದ್ರಗಳಲ್ಲಿ ತೆಗೆದುಕೊಂಡಿದ್ದು ಸಂತೋಷದ ವಿಷಯ, ಇನ್ನೂ ಕೂಡ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಈ ಟೋಲ್‍ಗೇಟ್ ಕಾನೂನು ನಿಯಮ ಗಾಳಿಗೆ ತೂರಿ ಟೋಲ್ ವಸೂಲಿ ಮಾಡುತ್ತಿರುವುದು ಖಂಡನೀಯ ಅದೇ ರೀತಿ ಸ್ಥಳೀಯರಿಗೆ ರಿಯಾಯಿತಿ ನೀಡದೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಸ್ಥಳೀಯ ಸಾರ್ವಜನಿಕರಿಗೆ ರಿಯಾಯಿತಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಆರ್. ಗಣಪತರಾವ್ ಮಾತನಾಡಿ ಈಗಾಗಲೇ ಶಾಸಕರು ಅಧಿಕಾರಿಗಳು ಕೆಲಸ ಮಾಡಿ ಇಲ್ಲವೇ ಮನೆಯಲ್ಲಿ ಕೂಡಿ ಎಂದು ಹೇಳಿದ್ದಾರೆ ಇದರ ತಾತ್ಪರ್ಯವೇನೆಂದರೆ ತಾಲ್ಲೂಕಾ ಆಡಳಿತ ಸಂಪೂರ್ಣ ವಿಫಲವಾಗಿದೆ ಅಧಿಕಾರಿಗಳಿಗೆ ತಾಲ್ಲೂಕಿನ ಶಾಸಕರಾಗಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ಕೊಡುತ್ತಿಲ್ಲ ಎಂಬುದು ಕಣ್ಣಿಗೆ ಕಾಣಿಸುತ್ತದೆ. ಹಗಲು ದರೋಡೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಶಾಸಕರು ಇಂಥ ಕೆಲಸಕ್ಕೆ ಬಾರದ ಅಧಿಕಾರಿಗಳನ್ನು ತೆಗೆದು ಹಾಕಿ ನಿಷ್ಠಾವಂತ ಅಧಿಕಾರಿಗಳನ್ನು ನಿಯುಕ್ತಿ ಮಾಡಲಿ, ತಾಲ್ಲೂಕಿನ ಸಾರ್ವಜನಿಕರು ಈಗಾಗಲೇ ತೊಂದರೆ ಅನುಭವಿಸುತ್ತಿದ್ದು ಈ ದೇಗಲಮಡಿ ಕ್ರಾಸ್ ಟೋಲ್‍ಗೇಟ್‍ನಲ್ಲಿ ಸ್ಥಳೀಯ ಸಾರ್ವಜನಿಕ ರಿಯಾಯಿತಿ ಕೊಡದೆ ಇರುವುದು ತುಂಬಾ ದುಃಖದ ಸಂಗತಿ ಕೂಡಲೇ ಅಧಿಕಾರಿಗಳು ಶಾಸಕರು ಎಚ್ಚೆತ್ತುಕೊಂಡು ಸ್ಥಳೀಯರಿಗೆ ರಿಯಾಯಿತಿ ಕೊಡಬೇಕೆಂದು ಆಗ್ರಹಿಸಿದರು .

ಈ ವೇಳೆ ಪುರಸಭೆ ಉಪಾಧ್ಯಕ್ಷ ಸಯ್ಯದ್ ಶಬ್ಬೀರ್, ಅಬ್ದುಲ್ ಬಾಸೀದ್, ಸಂತೋಷ್ ಗುತ್ತೇದಾರ್, ಚಿತ್ರಶೇಖರ ಪಾಟೀಲ್, ಮಾರುತಿ ಗಂಜಗಿರಿ, ಕಾಶಿರಾಮ್ ದೇಗಲಮಡಿ, ವಿಲಾಸ್, ಅನ್ವರ್ ಖತೀಬ್ , ಮಂಜುನಾಥ್ ಲೇವಡಿ, ರಾಜಕುಮಾರ್ ಕೋಳ್ಳುರ್, ನಾಗಾರ್ಜುನ್ ಕಟ್ಟಿ, ಶಶಿ ಮೇತ್ರಿ, ಮಗ್ದೂಮ್, ಆನಂದ್ ಹಿತ್ತಲ್, ಇನ್ನೂ ಹಲವಾರು ಸ್ಥಳೀಯ ಮುಖಂಡರುಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos