ಮಿಥನ್ ದಾಳಿಗೆ ಉತ್ತರ ತತ್ತರ

ಮಿಥನ್ ದಾಳಿಗೆ ಉತ್ತರ ತತ್ತರ

ಹುಬ್ಬಳ್ಳಿ,ಡಿ. 18 : ರಾಜನಗರ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಬಲಗೈ ಅನುಭವಿ ವೇಗದ ಬೌಲರ್ ಅಭಿಮನ್ಯು ಮಿಥುನ್ (60ಕ್ಕೆ 6 ವಿಕೆಟ್) ದಾಳಿಗೆ ತತ್ತರಿಸಿರುವ ಉತ್ತರ ಪ್ರದೇಶ ಎರಡನೇ ದಿನದಾಟದ ಮೊದಲ ಅವಧಿಯಲ್ಲೇ 111.2 ಓವರ್ಗಳಲ್ಲಿ 281 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.
ಮಾರಕ ದಾಳಿ ಸಂಘಟಿಸಿದ ಅಭಿಮನ್ಯು ಮಿಥುನ್ 60 ರನ್ ತೆತ್ತು ಆರು ವಿಕೆಟ್ ಕಬಳಿಸಿ ಮಿಂಚಿದರು. 232/5 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಉತ್ತರ ಪ್ರದೇಶ ಮತ್ತಷ್ಟು 49 ರನ್ ಪೇರಿಸುವುದರೆಡೆಗೆ ಉಳಿದ ಐದು ವಿಕೆಟುಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿತವನ್ನು ಅನುಭವಿಸಿತು.ಮೊದಲ ದಿನದಾಟದಲ್ಲಿ ಆರ್ಯನ್ ಜುಯಲ್ ಆಕರ್ಷಕ ಶತಕವನ್ನು (109) ಶತಕವನ್ನು ಬಾರಿಸಿದರೆ ಎರಡನೇ ದಿನದಾಟದಲ್ಲಿ ಮೊಹಮ್ಮದ್ ಸೈಫ್ 80 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಸೌರಭ್ ಕುಮಾರ್ 27 ರನ್ ಗಳಿಸಿದರು. ಕರ್ನಾಟಕ ಪರ ಮಿಥುನ್ 25 ಓವರ್ಗಳಲ್ಲಿ 60 ರನ್ ತೆತ್ತು ಆರು ವಿಕೆಟ್ ಕಬಳಿಸಿದರು. ಇದರಲ್ಲಿ ಐದು ಮೇಡನ್ ಓವರ್ಗಳು ಸೇರಿದ್ದವು. ಇವರಿಗೆ ಉತ್ತಮ ಸಾಥ್ ನೀಡಿದ ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು.
ಮೊದಲ ದಿನದಾಟದಲ್ಲಿ ಅಭಿಮನ್ಯು ಮಿಥುನ್ ರಣಜಿ ಟ್ರೋಫಿ ಟೂರ್ನಿಯಲ್ಲಿ 250 ವಿಕೆಟ್ ಸಾಧನೆ ಮಾಡಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಏಳನೇ ಬೌಲರ್ ಎಂಬ ಹಿರಿಮೆಗೆ ಭಾಜನವಾಗಿದ್ದರು. ಹಾಗೆಯೇ ರಣಜಿ ಟ್ರೋಫಿಯಲ್ಲಿ ಮೂರನೇ ವೈಯಕ್ತಿಕ ಶ್ರೇಷ್ಠ ಬೌಲಿಂಗ್ ಸಾಧನೆಯನ್ನು ಮಾಡಿದ್ದಾರೆ.
ಟ್ರೋಫಿಯಲ್ಲಿ  ಮಿಥುನ್  ಬೌಲಿಂಗ್ ಸಾಧನೆ
6/36, ಮಹಾರಾಷ್ಟ್ರ ವಿರುದ್ಧ, ಪುಣೆ, 2012
6/52, ಒಡಿಶಾ ವಿರುದ್ಧ, ಕಟಕ್, 2013
60/6, ಉ.ಪ್ರದೇಶ ವಿರುದ್ಧ, ಹುಬ್ಬಳ್ಳಿ, 2019
6/71, ಮುಂಬಯಿ ವಿರುದ್ಧ, ಮೈಸೂರು, 2010
6/86, ಉತ್ತರ ಪ್ರದೇಶ ವಿರುದ್ಧ, ಮೀರತ್, 2009

ಫ್ರೆಶ್ ನ್ಯೂಸ್

Latest Posts

Featured Videos