ನಿಮೋಗೆ ನಮೋ ಭೇಟಿ..!

 ನಿಮೋಗೆ ನಮೋ ಭೇಟಿ..!

ನವದೆಹಲಿ,ಜು. 3 : ನಿಮೋ ಪ್ರದೇಶ ಲೇಹ್‍ನಿಂದ 11 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿದೆ. ಪ್ರಧಾನಿ ಮೋದಿ ಇಂದು ಲೇಹ್‍ನ ಅತ್ಯಂತ ಎತ್ತರದ ಪ್ರದೇಶದ ನಿಮೋಗೆ ಭೇಟಿ ನೀಡಿ ಹೊಸ  ಇತಿಹಾಸ  ಸೃಷ್ಟಿಸಿದ್ದಾರೆ. ಯಾವುದೇ ಒಬ್ಬ ಪ್ರಧಾನಿ ಈ ಪ್ರದೇಶಕ್ಕೆ ಭೇಟಿ ಕೊಟ್ಟಿರುವ ಉದಾಹರಣೆಗಳಿಲ್ಲ. ಅತ್ಯಂತ ದುರ್ಗಮ, ಹಿಮಚ್ಛಾಧಿತ ಈ ಪ್ರದೇಶಕ್ಕೆ ಸಾಮಾನ್ಯ ಸೇನಾ ಮುಖ್ಯಸ್ಥರೇ ಭೇಟಿ ಕೊಡುವುದು ಅಪರೂಪ.  ಪ್ರಧಾನಿಯವರು ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಲೇಹ್‍ಗೆ ತೆರಳಿ ಅಲ್ಲಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‍ನಲ್ಲಿ ನಿಮೋಗೆ ಆಗಮಿಸಿದರು.

ಈ ಪ್ರದೇಶಕ್ಕೆ ಈವರೆಗೂ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಪ್ರಧಾನಿ ಕೂಡ ಭೇಟಿ ನೀಡಿರಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಸೈನಿಕರೊಂದಿಗೆ ಮುಕ್ತವಾಗಿ ಮಾತನಾಡಿ, ಕುಂದುಕೊರತೆಗಳು, ಗಡಿ ಉದ್ವಿಗ್ನತೆ ಕುರಿತಂತೆ ಖುದ್ದು ಸೈನಿಕರಿಂದಲೇ ಮಾಹಿತಿ ಪಡೆದರು. ದೇಶದ ಪ್ರಧಾನಿಯವರೇ ತಮ್ಮನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಕ್ಕೆ ಸ್ವತಃ ಸೈನಿಕರೇ ಪುಳಕಿತರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos