ನಿಡಗಲ್ ದುರ್ಗ ಪ್ರವಾಸಿ ಕೇಂದ್ರವಾಗಿಸಲು ಒತ್ತಾಯ

  • In State
  • August 19, 2020
  • 37 Views
ನಿಡಗಲ್ ದುರ್ಗ ಪ್ರವಾಸಿ ಕೇಂದ್ರವಾಗಿಸಲು ಒತ್ತಾಯ

ಪಾವಗಡ:ಐತಿಹಾಸಿಕ ಮಹತ್ವವಿರುವ ನಿಡಗಲ್ ದುರ್ಗ ವೈಭವ ಮತ್ತೆ ಮರುಕಳಿಸಬೇಕು ಹಾಗೂ ಇಲ್ಲಿನ ತಾಣವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ನಿಡಗಲ್ ವಾಲ್ಮೀಕಿ  ಪೀಠಾಧ್ಯಕ್ಷ ಶ್ರೀ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.

ಶ್ರಾಮಣ ಮಾಸದ ಕಡೆ ಸೋಮವಾರದ ಪ್ರಯುಕ್ತ ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ನಡೆದ ನಿಡಗಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ದಕ್ಷಿಣ ಭಾರತದಲ್ಲೇ ಅತ್ಯಂತ ವೈಭವಯುತವಾಗಿ ನಡೆದ ನಿಡಗಲ್ ದುರ್ಗ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಎಂದರು.

ಕೋಟೆ ಕೊತ್ತಲಗಳು ದೇವಾಲಯಗಳನ್ನು ಇಂದಿಗೂ ಕಾಣಬಹುದು. ಶ್ರಾವಣ ಮಾಸದ ಪ್ರಯುಕ್ತ ಸಾವಿರಾರು ಭಕ್ತರ ದಂಡು ನಿಡಗಲ್ಲಿನ ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದು ಇಂತಹ ಪವಿತ್ರ ಧಾರ್ಮಿಕ ಪುಣ್ಯಕ್ಷೇತ್ರ ನಿಡಗಲ್ಲನ್ನು ಪ್ರವಾಸೋದ್ಯಮ ಕೇಂದ್ರ ಮಾರ್ಪಾಡಿಗೆ ಹೆಚ್ಚು ಒತ್ತು ನೀಡುವ ಮೂಲಕ ತಾಲ್ಲೂಕು ಅಭಿವೃದ್ಧಿ ಮಾಡಬೇಕಿದ್ದು, ಇರುವ ಎಲ್ಲಾ ಐತಿಹಾಸಿಕ ಮಹತ್ವದ ಸ್ಮಾರಕಗಳ ರಕ್ಷಣೆಯಾಗಬೇಕಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos