ಹಣ ಪೀಕುವ ನೈಸ್ ರಸ್ತೆ ಗುಂಡಿಗಳ ಸವಾಲು

ಹಣ ಪೀಕುವ ನೈಸ್ ರಸ್ತೆ ಗುಂಡಿಗಳ ಸವಾಲು

ಬೆಂಗಳೂರು, ಸೆ. 11: ಆರಂಭ ಶೂರತ್ವ ಎಂಬಂತೆ ಮೊದಲಿಗೆ ಅಸಲಿಯತ್ತು ಗುಣಮಟ್ಟ ಕಾಯ್ದುಕೊಂಡಿದ್ದ ನೈಸ್ ರಸ್ತೆಯಲ್ಲೀಗ ಎಲ್ಲಿ ನೋಡಿದರೂ ಗುಂಡಿಗಳದೇ ಕಾರುಬಾರಾಗಿದೆ.

ರಸ್ತೆಯ ನಿರ್ವಹಣೆ ಮಾಡದ ನೈಸ್ ಸಂಸ್ಥೆ ನಿರ್ಲಕ್ಷ್ಯದಿಂದಾಗಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣ ಗೊಂಡಿವೆ. ದುಬಾರಿ ಹಣ ವಸೂಲಿ ಮಾಡುವ ಅಪಖ್ಯಾತಿ ಪಡೆದಿರುವ ನೈಸ್ ಸಂಸ್ಥೆ ಹಣ ವಸೂಲಿ ಮಾಡಿದಂತೆ ರಸ್ತೆ ಗುಂಡಿ ಮುಕ್ತ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕೆಲವು ಕಡೆ ಮಾತ್ರ ಸಿಸಿ ರಸ್ತೆ ನಿರ್ಮಿಸಿರುವ ಸಂಸ್ಥೆ ಮತ್ತೆ ಕೆಲವು ಕಡೆ ಡಾಂಬರು ಹಾಕಿದೆ. ಭಾರಿ ವಾಹನಗಳು ಸಂಚಾರ ವ್ಯವಸ್ಥೆ ಇರುವುದರಿಂದ ಭಾರಕ್ಕೆ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ದೊಡ್ಡ ದೊಡ್ಡ  ಗುಂಡಿಗಳು ನಿರ್ಮಾಣಗೊಂಡಿವೆ.

ಎಲೆಕ್ಟ್ರಾನಿಕ್ ಸಿಟಿಯಿಂದ ಗೊಟ್ಟಿಗೆರೆವರೆಗೆ, ನೆಲಮಂಗಲ ಟೋಲ್ ಬಳಿ, ಮಾಗಡಿ ಮೈಸೂರು ರಸ್ತೆ ಸಂಪರ್ಕಿಸುವ ಭಾಗಗಳಲ್ಲಿ ಬೃಹತ್ ಪ್ರಮಾಣದ ಗುಂಡಿಗಳು ನಿರ್ಮಾಣ ಗೊಂಡಿವೆ.

ತುಮಕೂರು ರಸ್ತೆ, ಕನಕಪುರ ರಸ್ತೆ, ನಾಲ್ಕು ಹೆದ್ದಾರಿಗಳಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯಾಗಿರುವುದಲ್ಲದೆ, ಸಿಟಿ ಒಳಗಡೆ ಭಾರಿ ಪ್ರಮಾಣದ ವಾಹನಗಳ ಸಂಚಾರ ನಿಷೇದ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಇರುವ ಕಾರಣ ಈ ರಸ್ತೆ ಸಂಚಾರಕ್ಕೆ ಅನುಕೂಲ ವಾಗಿದೆ.

ಐಟಿ ಕಂಪನಿಗಳು ಸೇರಿದಂತೆ ನಾನಾ ಕೈಗಾರಿಕಾ ಪ್ರದೇಶದ ನೆಲೆಯಾಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಮೂಲಕ ಸಂಚಾರಕ್ಕೆ ಅನುಕೂಲ ಇರುವುದರಿಂದ ಈ ರಸ್ತೆಯಲ್ಲಿ ಸಂಚಾರ ಹೆಚ್ಚಿರುತ್ತದೆ.

ಟೋಲ್ ಹಣ ಜಾಸ್ತಿ ಆದರೂ ಪರವಾಗಿಲ್ಲ ಟ್ರಾಫಿಕ್ ಸಮಸ್ಯೆ ಎದುರಿಸೊ ಬದಲು ಈ ರಸ್ತೆಯನ್ನು ಬಳಸುತ್ತಾರೆ. ದುಬಾರಿ ಹಣ ತೆತ್ತು ನೈಸ್ ರಸ್ತೆಯಲ್ಲಿ ಸಂಚಾರಕ್ಕಿಳಿದರೂ ಗುಂಡಿ ಗಂಡಾಂತರಗಳಿಂದ ಪರದಾಡುವಂತಾಗಿದೆ. ರಸ್ತೆ ಅಗಲ ಇರುವ ಕಾರಣ ವಾಹನಗಳು ವೇಗವಾಗಿ ಸಂಚರಿಸುತ್ತಿರುತ್ತವೆ. ಅಲ್ಲಲ್ಲಿ ಎದುರಾಗುವ ಗುಂಡಿಗಳಿಂದಾಗಿ ಭಾರಿ ವಾಹನಗಳು ನಿಯಂತ್ರಿಸಲು ಬ್ರೇಕ್ ಹಾಕಿದರೆ ಹಿಂಬದಿಯಲ್ಲಿ ಬರುವ ವಾಹನಗಳು ಡಿಕ್ಕಿ ಹೊಡೆದುಕೊಳ್ಳುತ್ತಿರುವುದು ಈ ರಸ್ತೆಯಲ್ಲಿ ಸರ್ವೇ ಸಾಮಾನ್ಯವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಜೀವ ಬಿಗಿ ಹಿಡಿದು ಸಂಚರಿಸುವಂತಹ ವಾತಾವರಣ ನಿರ್ಮಾವಾಗಿದೆ.

ಗುಂಡಿಗಳಿರುವುದು ಗೊತ್ತಾಗುವುದಿಲ್ಲ

*ಮಳೆ ಬಂದರೆ  ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಗಳಿರುವುದು ಗೊತ್ತಾಗುವುದಿಲ್ಲ. ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರ ಬಲಿಗಾಗಿ ಕಾಯ್ದು ನಿಂತಿದೆ ನೈಸ್ ರಸ್ತೆ. ಯಶವಂತಗೌಡ ವಾಹನ ಸವಾರ.

*ಸಿಟಿ ಒಳಗಡೆ ಟ್ರಾಫಿಕ್ ಸಮಸ್ಯೆ ಕಾರಣ ಕೆಲಸಕ್ಕೆ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ಗುಂಡಿಗಳು ದೊಡ್ಡ ಪ್ರಮಾಣದಲ್ಲಿರುವ ಕಾರಣ ಒಮ್ಮೊಮ್ಮೆ ಬೈಕ್ ನಿಯಂತ್ರಣ ಸಾಧಿಸಲು ಕಷ್ಟವಾಗುತ್ತದೆ. ಅಷ್ಟೊಂದು ಹಣ ವಸೂಲಿ ಮಾಡುವ ಸಂಸ್ಥೆ ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿದ್ದಾರೆ. ಅಶ್ವತ್ಥ ನಾರಾಯಣ ಚಿಕ್ಕಬಿದರಕಲ್ಲು ನಿವಾಸಿ

ಟೋಲ್ ದರ ಪಟ್ಟಿ

ದ್ವಿಚಕ್ರ ವಾಹನ…. 35.ರೂ.

ಕಾರು………………100. ರೂ.

ಲಘು ವಾಹನ…..120. ರೂ.

ಲಾರಿ……………..200.ರೂ.

ಬಸ್ಸು…………….20.ರೂ. ಭಾರಿವಾಹನ ……215.ರೂ.

ಫ್ರೆಶ್ ನ್ಯೂಸ್

Latest Posts

Featured Videos