ಕೆಜಿಎಫ್‌ನಿಂದ ಹೊಸ ದಾಖಲೆ

ಕೆಜಿಎಫ್‌ನಿಂದ ಹೊಸ ದಾಖಲೆ

ಬೆಂಗಳೂರು, ಡಿ. 07: ಕನ್ನಡ ಚಿತ್ರರಂಗದಲ್ಲಿ `ಕೆಜಿಎಫ್’ ತೆರೆಕಂಡಾಗಿನಿಂದ ಈ ಸಿನಿಮಾ ಮಾಡಿದ ದಾಖಲೆ ಒಂದೆರಡಲ್ಲ. ಈಗ ಚಿತ್ರ ತೆರೆಕಂಡು ವರ್ಷವಾಗುತ್ತಾ ಬಂದಿದೆ. ಈಗ ಕೆಜಿಎಫ್ ಹೊಸ ದಾಖಲೆಯೊಂದನ್ನು ಬರೆದಿದೆ.

ಹೌದು `ಕೆಜಿಎಫ್’ ಚಿತ್ರ ತೆರೆಗೆ ಬಂದಿದ್ದು, ಕಳೆದ ಡಿಸೆಂಬರ್ 21ರಂದು. ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿದ್ದ ಈ ಸಿನಿಮಾ ದಾಖಲೆ ಮೇಲೆ ದಾಖಲೆ ಸೃಷ್ಟಿಸಿತ್ತು. ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಈ ಚಿತ್ರ ಪಾತ್ರವಾಗಿತ್ತು. ಇನ್ನು, ಈ ಸಿನಿಮಾ ಬಾಲಿವುಡ್‌ನಲ್ಲೂ ಗಳಿಕೆ ಮಾಡಿದ್ದು ಅಷ್ಟಿಷ್ಟಲ್ಲ. ಈಗ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲೂ ದಾಖಲೆ ಸೃಷ್ಟಿಸಿದೆ.

`ಕೆಜಿಎಫ್’ ತೆರೆಕಂಡ ಕೆಲ ತಿಂಗಳ ನಂತರ ಅಮೆಜಾನ್ ಪ್ರೈಮ್‌ ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. 5 ಭಾಷೆಗಳಲ್ಲಿ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶವನ್ನು ಪ್ರೈಮ್‌ನವರು ಒದಗಿಸಿಕೊಟ್ಟಿದ್ದರು. 2019 ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎನ್ನುವ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿದೆ.

5 ಭಾಷೆ ಸೇರಿ ಕೆಜಿಎಫ್ ಕೋಟ್ಯಾಂತರ ವೀಕ್ಷಣೆ ಕಂಡಿದೆ. ಈ ಮೂಲಕ ಸಿನಿಮಾ ತೆರೆಕಂಡು ವರ್ಷವಾಗುತ್ತಾ ಬಂದಾಗ ಮತ್ತೊಂದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸೈಮಾ ಪ್ರಶಸ್ತಿ ವಿಭಾಗದಲ್ಲೂ ಕೆಜಿಎಫ್ ಸಾಕಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತ್ತು.

`ಕೆಜಿಎಫ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿದೆ. ಸದ್ಯ, `ಕೆಜಿಎಫ್ 2′ ಸಿದ್ಧತೆ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. 2020ರಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ.

 

ಫ್ರೆಶ್ ನ್ಯೂಸ್

Latest Posts

Featured Videos