ನೆಪ್ರೋ ಯುರಾಲಾಜಿ ಸಂಸ್ಥೆಯ ನಿರ್ದೇಶಕರ ಕೇಶವಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

ನೆಪ್ರೋ ಯುರಾಲಾಜಿ ಸಂಸ್ಥೆಯ ನಿರ್ದೇಶಕರ ಕೇಶವಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಹಲವಾರು ವರ್ಷಗಳಿಂದ ಕಾನೂನುಬಾಹಿರವಾಗಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ದೇಶದ ಪ್ರತಿಷ್ಠಿತ ನೆಪ್ರೋ ಯುರಾಲಾಜಿ ಸಂಸ್ಥೆ ಕಳೆದ 8 ವರ್ಷಗಳಿಂದ ಪ್ರಭಾರ ಹುದ್ದೆಯಲ್ಲಿರುವ ಸಂಸ್ಥೆಯ ನಿರ್ದೇಶಕರ ಅಕ್ರಮಗಳಿಂದಾಗಿ ಆರೋಪಗಳಲ್ಲಿ ಭಾಗಿಯಾಗಿರುವ ಪ್ರಭಾರಿ ನಿರ್ದೇಶಕ ಡಾ.ಕೇಶವಮೂರ್ತಿ ಅವರನ್ನು ಈ ಕೂಡಲೇ ಅಮಾನತ್ತು ಅಥವಾ ವಜಾಗೊಳಿಸಬೇಕು ಎಂದು ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಜೆ ಚಂದ್ರಪ್ಪ ಅಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 9 ರೋಗಿಗಳಲ್ಲಿ 4 ಸಾವಿಗೀಡಾಗಿ, ಐವರು ಚಿಂತಾಜನಕವಾಗಿದ್ದ ಪ್ರಕರಣ ಹಾಗೂ ರಾಮನಗರದ ರೋಗಿ ರಂಜಿತ್ ರಾಜ್ ಇನ್ನೂ ಕೋಮಾ ಸ್ಥಿತಿಯಲ್ಲಿರುವ ಪ್ರಕರಣದ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ನೇತೃತ್ವದ ಸಮಿತಿ ತನಿಖೆ ಮಾಡಿ ವರದಿ ಸಲ್ಲಿಸಿದೆ. ಆದರೆ ಈ ವರದಿ ಡಾ ಕೇಶವಮೂರ್ತಿ ಎನ್ನುವವರನ್ನು ಏನೂ ಮಾಡಲಾಗದ ಪರಿಸ್ಥಿತಿ ಉದ್ಭವವಾಗಿದೆ.

ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಹಾಗೂ ದಲಿತ ಸಂಘಟನೆಗಳು ಒಟ್ಟುಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಗುಡುಗಿದರು. ಅಷ್ಟೇ ಅಲ್ಲದೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಲಿತ ಮಹಿಳೆ ಮೇಲೆ ಹಲ್ಲೆ ನಡೆದಿದ್ದು ದೂರು ದಾಖಲಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನಿರ್ದೇಶಕರು 8 ವರ್ಷಗಳಿಂದಲೂ ಪ್ರಭಾರಿಯಾಗಿದ್ದಾರೆ. (ನಿಯಮದ ಪ್ರಕಾರ ಪ್ರಭಾರಿ ಅವಧಿ 6 ತಿಂಗಳು ಮಾತ್ರ) ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಪಿ.ಆರ್.ರಮೇಶ್, ರವಿ ಸುಬ್ರಮಣ್ಯ ಹಾಗೂ ರಾಮಚಂದ್ರ ಗುಹಾ  ಮತ್ತು ಆಸ್ಪತ್ರೆ ಮಹಿಳಾ ವೈದ್ಯರು ಸೇರಿದಂತೆ ಅನೇಕರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಸಂಸ್ಥೆಯ ಪ್ರಭಾರಿ ನಿರ್ದೇಶಕರ ವಿರುದ್ಧದ ಅಕ್ರಮಗಳ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತ್ತು.

ಆದರೆ ಆಸ್ಪತ್ರೆ ಅಕ್ರಮಗಳ ವಿರುದ್ಧದ ಲೋಕಾಯುಕ್ತ ತನಿಖೆ ನಡೆದು ವರ್ಷಗಳೇ ಕಳೆದಿವೆ. ಆದರೆ ಅದು ಇನ್ನೂ ಸರಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ಇಲ್ಲಿ ಆರೋಪಿಗಳು ವರದಿ ಸಲ್ಲಿಕೆಯನ್ನು ವಿಳಂಬ ಮಾಡುವ ನಿಟ್ಟಿನಲ್ಲಿ ಕೈ ಬೆಚ್ಚಗೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರಿಗೆ ಮತ್ತು ಅರೋಗ್ಯ ಸಚಿವರಿಗೂ ದೂರು ನೀಡಲಾಗಿದ್ದಾರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos