ಸುದೀಪ್ ಹುಟ್ಟುಹಬ್ಬಕ್ಕೆ ನೀರಜ್ ಶುಭಾಶಯ

ಸುದೀಪ್  ಹುಟ್ಟುಹಬ್ಬಕ್ಕೆ ನೀರಜ್ ಶುಭಾಶಯ

ಟೋಕಿಯೋ: ಒಲಂಪಿಕ್ಸ್  ನಲ್ಲಿ  ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಸುದೀಪ್ ಜನ್ಮದಿನಕ್ಕೆ ಹಾಗೂ ‘ವಿಕ್ರಾಂತ್ ರೋಣ’ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಹಿಂದಿ, ತೆಲುಗು, ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಕಿಚ್ಚ ಸುದೀಪ್ ಅಭಿಮಾನಿ ಪರಭಾಷೆಯಲ್ಲೂ ಬಳಗ ತುಂಬಾನೇ ಹೊಂದಿದೆ. ಸೆಲೆಬ್ರಿಟಿಗಳ ಜತೆ ಸುದೀಪ್ ಒಳ್ಳೆಯ ನಂಟು ಹೊಂದಿದ್ದಾರೆ.
ನಾಳೆ (ಸೆಪ್ಟೆಂಬರ್ 2) ‘ಡೆಡ್ ಮ್ಯಾನ್ ಆಯಂಥಮ್’ ರಿಲೀಸ್ ಆಗುತ್ತಿದೆ, ಇದಕ್ಕೆ ಸಂಬಂಧಪಟ್ಟಂತೆ ‘ವಿಕ್ರಾಂತ್ ರೋಣ’ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ನೀರಜ್ ಚೋಪ್ರಾ ಸುದೀಪ್ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಜತೆಗೆ ಸಿನಿಮಾಗೂ ಆಲ್ ದಿ ಬೆಸ್ಟ್ ಹೇಳಿದ್ದು, ಇದನ್ನು ನೋಡಿ ಅಭಿಮಾನಿಗಳು ಖುಷಿ ಜತೆ ಅಚ್ಚರಿ ಕೂಡ ಹೊರ ಹಾಕಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos