ನಾಯಕನ್ನಾಗಿ ಪೊಲಾರ್ಡ್ ಆಯ್ಕೆ

ನಾಯಕನ್ನಾಗಿ ಪೊಲಾರ್ಡ್ ಆಯ್ಕೆ

ಕಿಂಗ್ಸ್ಟನ್, ಸೆ. 9 : ವೆಸ್ಟ್ ಇಂಡೀಸ್ ಸೀಮಿತ ಓವರ್ಗಳ ಕ್ರಿಕೆಟ್ ತಂಡಕ್ಕೆ ಬಿಗ್ ಹಿಟ್ಟರ್ ಕೈರನ್ ಪೊಲಾರ್ಡ್ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಕಳೆದ ವಿಶ್ವಕಪ್ ವೈಫಲ್ಯ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದೆದುರು ವಿಂಡೀಸ್ ವೈಟ್ವಾಶ್ ಅನುಭವಿಸಿತ್ತು. ಈ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಜಾಸನ್ ಹೋಲ್ಡರ್ ಮತ್ತು ಕಾರ್ಲೋಸ್ ಬ್ರಾತ್ವೇಟ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿತು.
32 ವರ್ಷದ ಪೊಲಾರ್ಡ್ ಕೊನೆಯ ಸಲ 2016ರಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ವಿಶ್ವಕಪ್ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಲಭಿಸಿರಲಿಲ್ಲ. ಅವರು 101 ಏಕದಿನ ಮತ್ತು 62 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos