ಪೋರ್ನ್ ಸ್ಟಾರ್ ಆದ ನಟಿ ರಮ್ಯಾಕೃಷ್ಣ

ಪೋರ್ನ್ ಸ್ಟಾರ್ ಆದ ನಟಿ ರಮ್ಯಾಕೃಷ್ಣ

ಚೆನ್ನೈ, ಮಾ.12, ನ್ಯೂಸ್ ಎಕ್ಸ್ ಪ್ರೆಸ್: ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ ರಮ್ಯಾಕೃಷ್ಣ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಮ್ಯಾಕೃಷ್ಣ ಮೊದಲ ಬಾರಿಗೆ ಪೋರ್ನ್  ಸ್ಟಾರ್ ಆಗಿ ನಟಿಸುತ್ತಿದ್ದಾರೆ.

ತಮಿಳಿನಲ್ಲಿ ತ್ಯಾಗರಾಜನ್ ಕುಮಾರರಾಜ್ ನಿರ್ದೇಶನ ಮಾಡುತ್ತಿರುವ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಾಕೃಷ್ಣ ಮೊದಲ ಬಾರಿಗೆ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಲೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ರಮ್ಯಾಕೃಷ್ಣ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ, “ನನಗೆ ಈ ಪಾತ್ರ ಮಾಡುವಾಗ ಮೊದಲು ತುಂಬಾ ಮುಜುಗರ ಆಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಏಕೆಂದರೆ ಈ ಚಿತ್ರದ ಕಥೆಯಲ್ಲಿ ತುಂಬಾ ತಾಕತ್ ಇದೆ. ನಾನು ಈ ಪಾತ್ರವನ್ನು ಹಣಕ್ಕಾಗಿ ಮಾಡಿಲ್ಲ” ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos