ನಾಗರಳ್ಳಿ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿ

ನಾಗರಳ್ಳಿ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿ

ಯಡ್ರಾಮಿ: ಸಿಂದಗಿ, ಶಹಾಪುರ ಹೆದ್ದಾರಿಯಲ್ಲಿ ಬರುವ ಯಡ್ರಾಮಿ ತಾಲ್ಲೂಕಿನ ನಾಗರಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ ಶೀತಿಲಗೊಂಡಿದ್ದು ಯಾವಾಗ ಬಿಳುತ್ತದೆ ಎಂದು ತಿಳಿಯದ ಸ್ಥಿತಿಯಲ್ಲಿದೆ. ಆದರೆ ಅಧಿಕಾರಿಗಳ ಮತ್ತು ಜನ ಪ್ರತಿನಿದಿಗಳ ಕಣ್ಣಿಗೆ ಕಾಣದೆ ಇರೋದು ತುಂಬಾ ಶೊಚನೀಯ ವಿಚಾರವಾಗಿದೆ. ಈ ಬಸ್ ನಿಲ್ದಾಣದಲ್ಲಿ ಮುಂಬಯಿ, ಹೈದರಾಬಾದ್, ಸಾತಾರ, ಪೂಣೆ, ಸೊಲ್ಲಾಪುರ, ಬೆಂಗಳೂರು, ಬಸ್ ನಿಲ್ಲುಗಡೆ ಇದ್ದರು ಇಳಿದುಕೊಳ್ಳಲು ಬಸ್ ನಿಲ್ದಾಣ ಇಲ್ಲ ಮತ್ತು ಮಳೆ ಬಿಸಿಲು ಅಂತ ನಿಂತಿಕೊಳ್ಳಲು ಸ್ಥಳವಕಾಶ ಇಲ್ಲ. ಯಡ್ರಾಮಿ ತಾಲ್ಲೂಕಿನ ಮುಂದೆ ಹೋಬಳಿ ಕೇಂದ್ರವಾಗುವ ನಾಗರಳ್ಳಿ ಅಭಿವೃದ್ದಿಯಿಂದ ವಂಚಿತವಾಗಿರೊದು ದುರಾದೃಷ್ಟ ಎಂದು ಜನರು ಹೇಳುತ್ತಾರೆ.

ನಾಗರಳ್ಳಿಯಿಂದ ಪ್ರಯಾಣಿಸುವರು ಹೊಟೇಲ್ ಅಥವಾ ದಾರಿಯಲ್ಲಿ ನಿಂತು ಬಸ್ ದಾರಿ ಕಾಯುವ ಸಂದರ್ಭ ಇದೆ. ಬಸ್ ನಿಲ್ದಾಣ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಮತ್ತು ಪತ್ರಿಕೆಗಳಲ್ಲಿ ವರದಿ ಮಾಡಿದರು ಯಾವುದೆ ಕ್ರಮ ಕೈಗೊಳ್ಳದೆ ಇರೋದು ಜೇವರ್ಗಿ ಮತಕ್ಷೆತ್ರದ ಜನಪ್ರತಿನಿದಿಗಳು ಹೇಗೆ ಕೆಲಸ ಮಾಡಿದ್ದಾರೆ ಎಂದು ಜನರ ಕಣ್ಣಿಗೆ ಕನ್ನಡಿ ಹಿಡಿದ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯತೆ ತೋರುವುದು ಏಕೆ. ಕಡೆ ಪಕ್ಷ ಅದು ರಿಪೇರಿ ಮಾಡಲು ಮನಸು ಮಾಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಸ್ ನಿಲ್ದಾಣದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ ಮುಂದಿನ ದಿನಗಳಲ್ಲಿ ಬೇಗ ಕ್ರಮಕೈಗೊಳ್ಳತ್ತೇವೆ ಎಂದು ಮಳ್ಳಿ ಮತ್ತು ನಾಗರಳ್ಳಿ ಗ್ರಾಮಕ್ಕೆ ಬಂದಾಗೆಲ್ಲ ಶಾಸಕರು ಅಜಯಸಿಂಗ ಸುಳ್ಳು ಆಸವಾಸನೆ ಕೊಡುತ್ತಿದ್ದಾರೆ. ಯಡ್ರಾಮಿ ತಾಲ್ಲೂಕಿನ ಅಂಬೇಡ್ಕರ ಸೇನೆ ಉಪಾಧ್ಯಕ್ಷರಾ ಹಯ್ಯಾಳ. ಹೊಸಮನಿ ಆದಷ್ಟು ಬೇಗ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ನಾಗರಳ್ಳಿ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಬೇಕು ಇಲ್ಲಾವಾದರೆ ಎಲ್ಲಾ ಸಂಘಟನೆಯವರು ಸೇರಿ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕರೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos