ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನವಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಇದೀಗ ಒಕ್ಕಲಿಗ ನಾಯಕರು ಸಿಡಿದೆದಿದ್ದು, ಮುನಿರತ್ನ ಅವರ ಪ್ರಕಾರಗಳನ್ನು ಎಸ್ಐಟಿಗೆ ವಹಿಸುವಂತೆ ಒಕ್ಕಲಿಗ ಸಚಿವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧವೂ ಎಸ್‌ಐಟಿ ಅಸ್ತ್ರ ಪ್ರಯೋಗಕ್ಕೆ ಪ್ಲ್ಯಾನ್ ಮಾಡಿದ್ದು, ಸಿಎಂ ಭೇಟಿ ವೇಳೆ ಹೆಚ್‌ಡಿಕೆ ವಿರುದ್ಧವೂ ಎಸ್‌ಐಟಿ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಮಾಡಿದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಿನ್ನೆ ರಾತ್ರಿ ಶಾಸಕರು, ಮುಂಖಂಡರು ಸಭೆ ಮಾಡಿದ್ವಿ. ಮತ್ತೊಂದು ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿ, ಜೆಡಿಎಸ್ ಒಕ್ಕಲಿಗ ನಾಯಕರು ಶಾಸಕ ಮುನಿರತ್ನ ಪರ ನಿಂತಿದ್ದಾರೆ. ಇದು ನಮಗೆ ಬಹಳ ನೋವು ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹಿಂದೂ ಸಮುದಾಯದ ಭಾವನೆ ಕೆರಳಿಸುತ್ತಿದೆ: ವಿಜಯೇಂದ್ರ
ಸಮಾಜದ ಪರ ನಿಲ್ಲದೇ ಇರೋದಕ್ಕೆ ನೋವು ತಂದಿದೆ. ಇದನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು ಎಂದರು. ಮುನಿರತ್ನ ವಿರುದ್ಧ ಕೂಡ ಎಸ್‌ಐಟಿ ತನಿಖೆಯಾಗಬೇಕು. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಈಗ ಒಳ್ಳೆಯ ಕೆಲಸಕ್ಕಿಂತ ತನಿಖೆಯಾಗುವುದು ಬಹಳ ಮುಖ್ಯ. ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ ಎಂದರು.
ಸಚಿವ ಚಲುವರಾಯಸ್ವಾಮಿ ಸಚಿವ ಕೃಷ್ಣಬೈರೇಗೌಡ, ಸಚಿವ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ, ಕುಣಿಗಲ್ ರಂಗನಾಥ್ ಸೇರಿ ಹಲವರು ನಿಯೋಗದಲ್ಲಿ ಇದ್ದರು.