ಡೀಸೆಲ್‍ಗಾಗಿ ಮುಗಿ ಬಿದ್ದ ಜನ

ಡೀಸೆಲ್‍ಗಾಗಿ ಮುಗಿ ಬಿದ್ದ ಜನ

ಹುಬ್ಬಳ್ಳಿ, ಡಿ. 3 : ರೈಲಿನ ಇಂಜಿನ್ ಇಂಧನ ಸೋರಿಕೆಯಿಂದ ಹುಬ್ಬಳ್ಳಿ-ಬೆಂಗಳೂರ ಪ್ಯಾಸೆಂಜರ್ ರೈಲು ಯಲವಿಗಿ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಸೋರುತ್ತಿರುವ ಡೀಸೆಲ್ ತುಂಬಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ.

ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಇಂಜಿನ್ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಹಿನ್ನೆಲೆ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಆದರೆ ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಬಾಟಲಿ ಕೊಡಗಳನ್ನು ತೆಗೆದುಕೊಂಡು ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಇಂಧನ ಸೋರಿಕೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.

ಫ್ರೆಶ್ ನ್ಯೂಸ್

Latest Posts

Featured Videos