ಎಂಟಿಬಿಗೆ ಮಂತ್ರಿ ಮಾಡಿ.!?

ಎಂಟಿಬಿಗೆ ಮಂತ್ರಿ ಮಾಡಿ.!?

ಹೊಸಕೋಟೆ, ಡಿ. 10 : ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸರ್ಕಾರ ರಚಿಸಲು ಕಾರಣವಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೊಸಕೋಟೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಹೊಸಕೋಟೆಯ ಎಂಟಿಬಿ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಬಿಜೆಪಿ ಮುಖಂಡ ಜಯರಾಜ್, ಹೊಸಕೋಟೆ ಅಭಿವೃದ್ಧಿ ಗೆ ಎಂಟಿಬಿಗೆ ಮಂತ್ರಿಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರಕ್ಕೆ ಎಂಟಿಬಿ ಮಂತ್ರಿ ತ್ಯಾಗ ಮಾಡಿದವರು ಅವರ ತ್ಯಾಗಕ್ಕೆ ಸಿಎಂ ಕೈ ಹಿಡಿಯಬೇಕು ಎಂಟಿಬಿ ಯೋಜನೆಗೆ ಕುತ್ತು ಬಾರದಂತೆ ಸಿಎಂ ನೋಡಿಕೊಳ್ಳಬೇಕು, ಸೋತೋರಿಗೆ ಮಂತ್ರಿ ಸ್ಥಾನ ಕೊಡಬಾರದು ಅಂತ ಹೇಳೋರಿಗೆ ಪ್ರತಿಕ್ರಿಯಿಸಿದ ಅವರು ಎಂಟಿಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಕಾನೂನು ತೊಡಕು ಸರಿಪಡಿಸಿ ಎಂಟಿಬಿನ ಮಂತ್ರಿ ಮಾಡಬೇಕು ಈ ಬಗ್ಗೆ ಕ್ಷೇತ್ರದ ಐದು ಸಾವಿರ ಜನ ಸಿಎಂ ಭೇಟಿ ಮಾಡಿ ಮನವಿ ಮಾಡ್ತೀವಿ ಕಾಂಗ್ರೆಸ್ ನಲ್ಲಿ ಎಂಟಿಬಿ ಅಭಿಮಾನಿಗಳಿದ್ದಾರೆ ಪಕ್ಷ ಬಿಡೋಕೆ ಸಿದ್ದರಿರಲಿಲ್ಲ ಮುಂದಿನದಿನಗಳಲ್ಲಿ ಎಲ್ರೂ ಒಗ್ಗಟ್ಟಾಗಿರಬೇಕು, ಶರತ್ ಬಚ್ಚೇಗೌಡರನ್ನ ಪಕ್ಷಕ್ಕೆ ಸೇರಿಸಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos